ದಕ್ಷಿಣ ಭಾರತದ ಖ್ಯಾತ ನಟಿ, ಪಂಚಭಾಷಾ ತಾರೆ ಪ್ರಿಯಾಮಣಿ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮದುವೆಯ ಮುಂಚೆ ತಮಗೆ ಸ್ನೇಹಿತನೊಬ್ಬನ ಜತೆ ಸಂಬಂಧವಿತ್ತು ಎಂದು ಹಬ್ಬಲಾದ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಪ್ರಿಯಾಮಣಿ ತನ್ನ ಕುಟುಂಬವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸ್ನೇಹಿತರು ಸ್ಥಾಪಿಸಿದ ಸ್ಟಾರ್ಟ್ಅಪ್ ಕಂಪನಿಯಲ್ಲಿ ಪಾಲುದಾರಳಾಗಲು ಉಪನ್ಯಾಸಕ ಕೆಲಸವನ್ನು ಬಿಟ್ಟಿದ್ದರಂತೆ. ಈ ಸಂದರ್ಭದಲ್ಲಿ ಕಂಪನಿಯ ಪಾಲುದಾರ ಹಾಗು ಸ್ನೇಹಿತನೊಂದಿಗೆ ಅಫೇರ್ ಇಟ್ಟುಕೊಂಡಿದ್ದರು ಎಂಬ ಮಾತುಗಳು ಕೇಳಿಬಂದಿತ್ತಂತೆ.
ಅನೇಕ ಜನರು ಈ ಬಗ್ಗೆ ಸ್ನೇಹಿತನ ಬಳಿಯು ಕೇಳಿದ್ದರು. ಅವನೊಂದಿಗೆ ಸಂಬಂಧವಿದೆಯೇ ಎಂದು ನನ್ನನ್ನೂ ಕೇಳಿದ್ದಾರೆ. ಆದರೆ, ನೀವು ನಿಜವಾಗಿಯೂ ಅವರೊಂದಿಗೆ ಸಂಬಂಧ ಹೊಂದಿದ್ದೀರಾ? ಈ ಪ್ರಶ್ನೆಗೆ ಉತ್ತರ ಬೇಕಾದರೆ ನೀವು ‘ಫ್ಯಾಮಿಲಿ ಮ್ಯಾನ್’ ಎರಡನೇ ಸರಣಿಯವರೆಗೆ ಕಾಯಬೇಕು ಎಂದು ಹೇಳಿದ್ದು, ಈ ಮೂಲಕ ಎರಡನೇ ಸರಣಿಯ ಪ್ರಮೋಷನ್ಗೆ ಪ್ರಚೋದನೆ ನೀಡುವುದರೊಂದಿಗೆ ಪ್ರಶ್ನೆಗೆ ಸ್ಪಷ್ಟನೆ ನೀಡದೇ ಪ್ರಶ್ನೆಯಾಗಿಯೇ ಕುತೂಹಲ ಕಾಯ್ದಿರಿಸಿದರು ನಟಿ ಪ್ರಿಯಾಮಣಿ.
ಪ್ರಿಯಾಮಣಿ ಅವರು ಕಳೆದ ವರ್ಷ ತೆರೆಕಂಡ ‘ಫ್ಯಾಮಿಲಿ ಮ್ಯಾನ್’ ವೆಬ್ ಸೀರಿಸ್ನಲ್ಲಿ ನಟಿಸಿದ್ದಾರೆ. ವೆಬ್ ಸೀರಿಸ್ನಲ್ಲಿ ಸುಚಿತ್ರಾ ಹೆಸರಿನ ನಾಯಕ ಮನೋಜ್ ಬಾಜ್ಪಾಯಿ ಪತ್ನಿಯ ಪಾತ್ರವನ್ನು ಪ್ರಿಯಾಮಣಿ ನಿರ್ವಹಿಸಿದ್ದಾರೆ.
ಮದುವೆ ನಂತರ ಸಿನಿಮಾ ಮೇಲಿನ ಜೋಶ್ ಕಳೆದುಕೊಂಡಿರುವ ಪ್ರಿಯಾಮಣಿ ಸಿನಿಮಾದಿಂದ ಕಿರುತೆರೆಗೆ ತಮ್ಮ ಹಾದಿಯನ್ನು ಬದಲಿಸಿದರು.ಸದ್ಯ ಇವರು ವೆಬ್ ಸೀರಿಸ್ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಬಿಜಿಯಾಗಿದ್ದಾರೆ.
ಅಂದಹಾಗೆ ಫ್ಯಾಮಿಲಿ ಮ್ಯಾನ್ -2 ವೆಬ್ ಸೀರಿಸ್ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಜೂನ್ 4ರಂದು ಪ್ರೀಮಿಯರ್ ಆಗಲಿದೆ. ಸಮಂತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿ, ವಿಕ್ಟರಿ ವೆಂಕಟೇಶ್ ಅಭಿನಯದ ನಾರಪ್ಪ ಚಿತ್ರದಲ್ಲಿ ಪ್ರಿಯಾಮಣಿ ಅಭಿನಯಿಸಿದ್ದಾರೆ.