ಪಡಿತರ ಚೀಟಿದಾರರಿಗೆ ಪ್ರಮುಖ ಎಚ್ಚರಿಕೆ. ನೀವು ಪ್ರತಿ ತಿಂಗಳು ಪಡಿತರ ತೆಗೆದುಕೊಳ್ಳುತ್ತಿದ್ದರೆ ಯಾವ ತೊಂದರೆಯಿಲ್ಲ. ಆದರೆ, ಮೂರು ತಿಂಗಳವರೆಗೆ ಪಡಿತರ ಸರಕುಗಳನ್ನು ತೆಗೆದುಕೊಳ್ಳದಿದ್ದರೆ ಮಾತ್ರ ನಿಮಗೆ ತೊಂದರೆಯಾಗಬಹುದಾಗಿದ್ದು, ಪಡಿತರ ಚೀಟಿ ರದ್ದಾಗುವ ಸಾಧ್ಯತೆಯಿದೆ.
ಆದರೆ, ಅದು ಇದು ಅಲ್ಲ. ದೆಹಲಿ ಸರ್ಕಾರ ಮುಂದಿನ ತಿಂಗಳಿನಿಂದ ಮನೆ ಸಮೀಕ್ಷೆ ನಡೆಸುತ್ತಿದೆ. ಇದರ ಭಾಗವಾಗಿ ಪಡಿತರ ಚೀಟಿ ಫಲಾನುಭವಿಗಳನ್ನು ಗುರುತಿಸುವುದಾಗಿದೆ. ಈ ಪ್ರಕ್ರಿಯೆಯಲ್ಲಿ ಮೂರು ತಿಂಗಳಿಗಿಂತ ಹೆಚ್ಚು ಪಡಿತರ ಸರಕುಗಳನ್ನು ತೆಗೆದುಕೊಲ್ಲದಿರುವವರ ಪಡಿತರ ಚೀಟಿಯನ್ನು ತೆಗೆದು ಹಾಕುವ ಸಂಭವವಿದೆ.
ಆದರೆ, ಯಾವುದೇ ಕಾರಣವಿಲ್ಲದೆ ಯಾವುದೇ ಕಾರ್ಡ್ ತೆಗೆಯುವುದಿಲ್ಲ ಎಂದು ದೆಹಲಿಯ ಆಹಾರ ಸಚಿವರು ಭರವಸೆ ನೀಡಿದ್ದಾರೆ. ಕಾರ್ಡ್ ನಿಷ್ಕ್ರಿಯವಾಗಿದ್ದು, ಅವರು ದೆಹಲಿಯಲ್ಲಿ ಇಲ್ಲದಿದ್ದರೆ ತಮ್ಮ ಕಾರ್ಡ್ ತೆಗೆಯುವುದಾಗಿ ಹೇಳಿದ್ದು, ಹೊಸ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ. ಪ್ರಸ್ತುತ ದೆಹಲಿಯಲ್ಲಿ 72 ಲಕ್ಷ ಪಡಿತರ ಚೀಟಿಗಳು ಮತ್ತು ಸುಮಾರು 2,000 ಪಡಿತರ ಅಂಗಡಿಗಳಿವೆ.