ಹೂವಿನಹಡಗಲಿ: ಕರೋನ ಹಿನ್ನಲೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಸರಳವಾಗಿ ಮೈಲಾರಲಿಂಗೇಶ್ವರ ಜಾತ್ರೆ ನಡೆದಿದ್ದು, ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕವಾಣಿ ನುಡಿದಿದ್ದು, ‘ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್’ ಎಂಬುದು ಗೊರವಯ್ಯ ಅವರು ಇಂದು ನುಡಿದ ಕಾರ್ಣಿಕವಾಣಿಯಾಗಿದೆ.
ಭರತ ಹುಣ್ಣಿಮೆಯ ಮೂರನೇ ದಿನದಂದು ಗೊರವಯ್ಯನವರು ಈ ವಾಣಿಯನ್ನು ವರ್ಷಕ್ಕೊಮ್ಮೆ ಮಾತ್ರವೇ ನುಡಿಯುತ್ತಾರೆ. ಹಾಗಾಗಿ ಇದನ್ನು ರಾಜ್ಯದ ಜನ ವರ್ಷದ ಭವಿಷ್ಯವಾಣಿ ಎಂದೇ ನಂಬಿದ್ದಾರೆ. ಇದು ರಾಜ್ಯದಲ್ಲಿ ಮೇಲಾರದ ಮಹಾಲಿಂಗೇಶ್ವರನ ಐತಿಹಾಸಿಕ ಕಾರ್ಣಿಕವೆಂದು ಪ್ರಸಿದ್ಧಿ ಪಡೆದಿದೆ.
ಮೈಲಾರ ಗೊರವಯ್ಯನ ಭವಿಷ್ಯವಾಣಿ: ವಿಶ್ಲೇಷಣೆ
ಭರತ ಹುಣ್ಣಿಮೆಯ ಮೂರನೇ ದಿನವಾದ ಇಂದು ಮೈಲಾರದಲ್ಲಿ ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕವಾಣಿ ನುಡಿದಿದ್ದು, ‘ಮುತ್ತಿನರಾಶಿ ಮೂರು ಭಾಗ ಆದಿತಲೆ ಪರಾಕ್’ ಎಂದಿದ್ದಾರೆ.
ಈ ವಾಕ್ಯದಡಿ ಭವಿಷ್ಯವನ್ನು ನೋಡುವುದಾದರೆ ಕೇಂದ್ರ ಸರ್ಕಾರದ ವಿರುದ್ಧ ರೈತರು ಈಗಾಗಲೇ ಕೃಷಿ ಕಾಯಿದೆ ಹಿಂಪಡೆಯುವಂತೆ ತಿರುಗಿ ಬಿದ್ದಿದ್ದಾರೆ. ಈ ನಡುವೆ ಮೀಸಲಾತಿ ಹೋರಾಟಗಳು ನಡೆಯುತ್ತಿವೆ. ಜೊತೆಗೆ ಧರ್ಮ ರಾಜಕಾರಣ ಮೇಳೈಸುತ್ತಿದೆ. ಹಾಗಾಗಿ ದೇಶದ ಜನ 3 ಪಂಗಡಗಳಾಗಿ ಹಗೆತನ ಭುಗಿಲೇಳಬಹುದು ಎಂದು ಊಹಿಸಲಾಗುತ್ತಿದೆ.
ಇದನ್ನು ಓದಿ: ಹರಪನಹಳ್ಳಿ ಮೈಲಾರಲಿಂಗೇಶ್ವರ ಕಾರ್ಣಿಕ: “ಭಾಗ್ಯದ ನದಿ ತುಂಬಿ ತುಳಕಿತಲೇ ಪರಾಕ್”