HSRP Number Plate: ವಾಹನ ಸವಾರರಿಗೆ ಹೈಕೋರ್ಟ್ ಗುಡ್‌ನ್ಯೂಸ್ ನೀಡಿದ್ದು, ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಗಡುವನ್ನು ನವೆಂಬರ್ 20ರವರೆಗೆ ವಿಸ್ತರಿಸಿ ಬುಧವಾರ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ಇದನ್ನು ಓದಿ: ಒಂದು ರಾಷ್ಟ್ರ ಒಂದು ಚುನಾವಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಹೌದು, ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ಕೋರಿ ಹಿರಿಯ ವಕೀಲ ದೇವದತ್ ಕಾಮತ್ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯ ವಾಹನ ಸವಾರರಿಗೆ ಕೊಂಚ ರಿಲೀಫ್ ನೀಡಿದೆ. ಆದರೆ, ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದವರಿಗೆ ದಂಡ ವಿಧಿಸುವ ಸಂಬಂಧ ಕೋರ್ಟ್ ನಾಳೆ ಆದೇಶ ನೀಡಲಿದೆ.
ಇದರಿಂದ ವಾಹನ ಸವಾರರಿಗೆ ಸದ್ಯಕ್ಕೆ ದಂಡದ ಟೆನ್ಷನ್ ತಪ್ಪಿದಂತಾಗಿದೆ. ಇನ್ನು, ಹೆಚ್‌ಎಸ್‌ಆರ್‌ಪಿ (HSRP Number Plate) ಅಳವಡಿಕೆಗೆ ಈ ಹಿಂದೆ ಸೆ.15ರ ಗಡುವು ನೀಡಲಾಗಿತ್ತು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment