ಗರ್ಭಿಣಿಯರಿಗೆ, ಹಾಲುಣಿಸುವ ತಾಯಂದಿರಿಗೆ ಮಾತೃಶ್ರೀ ಯೋಜನೆಯಡಿ 12 ಸಾವಿರ ರೂ ; ಅರ್ಜಿ ಸಲ್ಲಿಕೆ ಹೇಗೆ?

Matrusree Yojana : ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಕುಟುಂಬ) ಗರ್ಭಿಣಿ ಮಹಿಳೆಯರಿಗಾಗಿ ಕರ್ನಾಟಕ ಸರ್ಕಾರವು ಮಾತೃಶ್ರೀ ಯೋಜನೆಯನ್ನು 2018ರ ನವೆಂಬರ್ 1 ರಂದು ಆರಂಭಿಸಿದೆ. ರಾಜ್ಯ ಸರ್ಕಾರ ತಾಯಂದಿರ ಆಧಾರ್-ಲಿಂಕ್ ಮಾಡಿದ ಬ್ಯಾಂಕ್…

mathrushree yojana

Matrusree Yojana : ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಕುಟುಂಬ) ಗರ್ಭಿಣಿ ಮಹಿಳೆಯರಿಗಾಗಿ ಕರ್ನಾಟಕ ಸರ್ಕಾರವು ಮಾತೃಶ್ರೀ ಯೋಜನೆಯನ್ನು 2018ರ ನವೆಂಬರ್ 1 ರಂದು ಆರಂಭಿಸಿದೆ.

ರಾಜ್ಯ ಸರ್ಕಾರ ತಾಯಂದಿರ ಆಧಾರ್-ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಗೆ ಹಲವು ಕಂತುಗಳಲ್ಲಿ ಹಣವನ್ನು ಜಮೆ ಮಾಡುತ್ತದೆ. ಹೆರಿಗೆ ಪೂರ್ವದ ಮೂರು ತಿಂಗಳಿಗೆ ಎರಡು ಸಾವಿರ ಹಾಗೂ ಹೆರಿಗೆ ನಂತರದ ಮೂರು ತಿಂಗಳು ಎರಡು ಸಾವಿರ ನೀಡಲಾಗುತ್ತದೆ. ಹೀಗೆ ಒಟ್ಟು 12 ಸಾವಿರ ಮೊತ್ತ ಫಲಾನುಭವಿಗಳು ಮಾತೃಶ್ರೀ ಯೋಜನೆ ಮುಖಾಂತರ ಪಡೆಯಬಹುದಾಗಿದೆ.

ಮಾತೃಶ್ರೀ ಯೋಜನೆ

ರಾಜ್ಯ ಸರ್ಕಾರವು ಮಾತೃಶ್ರೀ ಯೋಜನೆಯ ಮೂಲಕ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಹೆರಿಗೆ ಪೂರ್ವದ 3 ತಿ೦ಗಳು ಹಾಗೂ ಬಾಣಂತಿಯರಿಗೆ ಹೆರಿಗೆ ನಂತರದ 3 ತಿಂಗಳ ಕಾಲ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣವನ್ನು ಜಮೆ ಮಾಡುತ್ತದೆ

Vijayaprabha Mobile App free

ಆರ್ಥಿಕ ನೆರವು

ಮಾತೃಶ್ರೀ ಯೋಜನೆಯು ಗರ್ಭಿಣಿಯರಿಗೆ ಗರ್ಭಧಾರಣೆ ಮತ್ತು ಬಾಣಂತಿಯರಿಗೆ ಶಿಶು ಪಾಲನೆ ಸಮಯದಲ್ಲಿ ಹಣಕಾಸಿನ ನೆರವನ್ನು ಒದಗಿಸುತ್ತದೆ. ಇದು ಇವರಿಗೆ ಉತ್ತಮ ಆರೊಗ್ಯ ಮತ್ತು ಆಹಾರ ಸೇವನೆಗೆ ಸಹಾಯ ಮಾಡುತ್ತದೆ.

ಆರೋಗ್ಯ ಸೇವೆಗಳು

ಗರ್ಭಿಣಿಯರ, ಹಾಲುಣಿಸುವ ತಾಯಂದಿರ ಹಾಗೂ ಮಗುವಿನ ಆರೋಗ್ಯವನ್ನು ಕಾಪಾಡಲು ಈ ಯೋಜನೆಯ ಹಣ ಸಹಾಯವಾಗುತ್ತದೆ. ನಿಯಮಿತ ವೈದ್ಯಕೀಯ ತಪಾಸಣೆ, ಸೂಕ್ತ ಶ್ಮೀನಿಂಗ್ ಮತ್ತು ಮಾನಿಟರಿಂಗ್ ನಂತಹ ಆರೋಗ್ಯ ಸೇವೆಗಳನ್ನು ಪಡೆಯಬಹುದು.

ಪೌಷ್ಟಿಕ ಆಹಾರ

ತಾಯಂದಿರಿಗೆ ಪೌಷ್ಠಿಕ ಮತ್ತು ಸಮರ್ಪಕ ಆಹಾರವನ್ನು ಒದಗಿಸಲು ಮಾತೃಶ್ರೀ ಯೋಜನೆಯು ಸಹಾಯ ಮಾಡುತ್ತದೆ. ಅಕ್ಕಿ, ಹಸಿರು ತರಕಾರಿಗಳು, ದ್ವಿದಳ ಧಾನ್ಯಗಳು, ಮೊಟ್ಟೆ ಮತ್ತು ನೆಲಗಡಲೆ-ಬೆಲ್ಲದ ಚಿಕ್ಕಿಯಂತಹ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು.

ಆಶ್ರಯ ಸೇವೆ

ಗರ್ಭಿಣಿಯರ ಮತ್ತು ತಾಯಂದಿರ ಆರೋಗ್ಯದ ಭದ್ರತೆಗೆ ಮತ್ತು ಸುರಕ್ಷತೆಗೆ ಆಶ್ರಯ ಸೇವೆ ಮುಖ್ಯವಾಗಿದೆ. ಅವರಿಗೆ ಸೂಕ್ತವಾದ ಆಶ್ರಯದ ವ್ಯವಸ್ಥೆಯನ್ನು ಮಾತೃಶ್ರೀ ಯೋಜನೆಯಿಂದ ಮಾಡಿಕೊಳ್ಳಬಹದು.

ಮಾತೃಶ್ರೀ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ?

  • ತಾಯಿ ಕಾರ್ಡ್
  • ಆಧಾರ್ ಕಾರ್ಡ್
  • ಚುನಾವಣಾ ಚೀಟಿ
  • ಆಧಾರ್ ಕಾರ್ಡ್ ಲಿಂಕ್ ಆದ ಬ್ಯಾಂಕ್ ಖಾತೆ
  • ಪತಿಯ ಆಧಾ‌ರ್ ಮತ್ತು ಮತದಾರರ ಗುರುತಿನ ಚೀಟಿ

ಈ ದಾಖಲಾತಿಗಳೊಂದಿಗೆ ಅಂಗನವಾಡಿ ಶಿಕ್ಷಕಿ ಅಥವಾ ಆಶಾ ಕಾರ್ಯಕರ್ತೆಯರ ಬಳಿ ಅರ್ಜಿ ಸಲ್ಲಿಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.