Ration card holders : ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ತುಂಬಾ ಮಹತ್ವದ್ದು, ಇನ್ನು ಆಗಾಗ ಪಡಿತರ ಚೀಟಿದಾರರಿಗೆ ಸರ್ಕಾರವು ಹಲವು ಸೌಲಭ್ಯಗಳನ್ನು ಒದಗಿಸುತ್ತಲೇ ಬಂದಿದ್ದು, ಇದೀಗ ಮತ್ತೆ ಹೊಸ ಮನೆ ಕಟ್ಟುವವರಿಗೆ ಶುಭಸುದ್ದಿಯೊಂದನ್ನು ನೀಡಿದೆ.
ಹೌದು, ಇದೀಗ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ರೇಷನ್ ಕಾರ್ಡ್ ಇದ್ದವರು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು.
ರೇಷನ್ ಕಾರ್ಡ್ ಇದ್ದವರಿಗೆ ಮಾತ್ರ ಇಷ್ಟೆಲ್ಲಾ ಯೋಜನೆಗಳು
ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ವತಿಯಿಂದ ಸಾಕಷ್ಟು ಯೋಜನೆಗಳಿವೆ. ಇವು ಪಡಿತರ ಕಾರ್ಡ್ ಹೊಂದಿದವರಿಗೆ ಮಾತ್ರ ಲಭ್ಯವಾಗುತ್ತವೆ. ಅವು ಯಾವುವು ಎಂದರೇ, ಪಿಎಂ ಕಿಸಾನ್, ಬೆಳೆ ವಿಮೆ, ಪ್ರಧಾನಮಂತ್ರಿ ಉಜ್ವಲ್ ಯೋಜನೆ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಪಿಎಂ ಆವಾಸ್ ಯೋಜನೆ, ಕಾರ್ಮಿಕ ಕಾರ್ಡ್, ಉಚಿತ ಪಡಿತರ ಯೋಜನೆ, ಉಚಿತ ಹೊಲಿಗೆ ಯಂತ್ರ ಸ್ಕೀಂ ಸೇರಿದಂತೆ ಹಲವಾರು ಯೋಜನೆಗಳಿವೆ. ಪಡಿತರ ಚೀಟಿಯಲ್ಲಿ ಬಿಪಿಎಲ್, ಎಪಿಲ್, ಎಎಪಿ ಎಂಬ ಕಾರ್ಡ್‌ಗಳಿವೆ.