ಬೆಂಗಳೂರು: ದೇಶದ ತೈಲ ಮಾರುಕಟ್ಟೆಯಲ್ಲಿ ಶುಕ್ರವಾರ ಪೆಟ್ರೋಲ್, ಡಿಸೇಲ್ ಬೆಲೆ ಯಾವುದೇ ಬದಲಾವಣೆಯಾಗದೆ ಸ್ಥಿರವಾಗಿದ್ದು, ಬೆಂಗಳೂರಿನಲ್ಲಿ 1 ಲೀ. ಪೆಟ್ರೋಲ್ ದರ ₹104.70 ಇದ್ದು, 1 ಲೀ.ಡೀಸೆಲ್ ದರ ₹94.04 ದಾಖಲಾಗಿದೆ.
ಇನ್ನು, ದೆಹಲಿಯಲ್ಲಿ 1 ಲೀ.ಪೆಟ್ರೋಲ್ ದರ ₹101.19 ಆಗಿದ್ದು, 1 ಲೀ.ಡೀಸೆಲ್ ದರ ₹88.62 ದಾಖಲಾಗಿದ್ದು, ಮುಂಬೈನಲ್ಲಿ 1 ಲೀ.ಪೆಟ್ರೋಲ್ ದರ ₹107.26 ಆಗಿದ್ದು, 1 ಲೀ.ಡೀಸೆಲ್ ದರ ₹96.19 ದಾಖಲಾಗಿದ್ದು, ಹೈದರಾಬಾದಿನಲ್ಲಿ 1 ಲೀ.ಪೆಟ್ರೋಲ್ ದರ ₹105.26 ದಾಖಲಾಗಿದೆ.
ಶುಕ್ರವಾರದ ಚಿನ್ನ, ಬೆಳ್ಳಿ ದರ:
ದೇಶದಲ್ಲಿ ಶುಕ್ರವಾರ ಚಿನ್ನದ ದರ ಅಲ್ಪ ಇಳಿಕೆಯಾಗಿದ್ದು, 1 ಗ್ರಾಂ ಚಿನ್ನದ ಬೆಲೆ ₹4,578 ದಾಖಲಾಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹44,000 ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹48,000 ಆಗಿದ್ದು, ಒಂದು ಕೆಜಿ ಬೆಳ್ಳಿ ಬೆಲೆ ₹62,800 ಆಗಿದೆ.
ಇನ್ನು, ಹೈದರಾಬಾದಿನಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹44,000 ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ₹48,000 ದಾಖಲಾಗಿದ್ದು, ಒಂದು ಕೆಜಿ ಬೆಳ್ಳಿ ದರ ₹67,800 ಆಗಿದೆ.




