ಬೆಂಗಳೂರು: ಹೋಟೆಲ್, ರೇಷ್ಟೊರೆಂಟ್ ಗಳನ್ನು ಆಯ್ದ ಸ್ಥಳಗಳಲ್ಲಿ ದಿನದ 24 ಗಂಟೆಯೂ ತೆರೆಯಲು ನಗರ ಪೊಲೀಸ್ ಇಲಾಖೆ ಅನುಮತಿ ನೀಡಿದೆ.
ಹೌದು, ರಾಜ್ಯದ ಇಲ್ಲ ಕಡೆ ದಿನವಿಡೀ ಈ ಸೇವೆಯನ್ನು ನೀಡಬಹುದು ಎಂದು ಸರ್ಕಾರ 2021ರಲ್ಲಿ ಆದೇಶ ಹೊರಡಿಸಿತ್ತು. ಆದರೆ ಪೊಲೀಸ್ ಇಲಾಖೆ ಸಮ್ಮತಿಸಿರಲಿಲ್ಲ.
ಆದರೆ ಈ ಸಂಬಂಧ ಪೊಲೀಸ್ ಇಲಾಖೆ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸದ್ಯ ಬೆಂಗಳೂರು ನಗರದ ಪ್ರಮುಖ ಬಸ್ ನಿಲ್ದಾಣಗಳು, ರೈಲು ನಿಲ್ದಾಣ ಸೇರಿದಂತೆ ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಹೋಟೆಲ್ ಮತ್ತು ರೇಷ್ಟೊರೆಂಟ್ ಗಳನ್ನು ದಿನದ 24 ಗಂಟೆಗಳ ಕಾಲ ತೆರೆಯಲು ಅನುಮತಿ ನೀಡಲಾಗಿದೆ.
ಇನ್ನು, ಮೆಜಿಸ್ಟಿಕ್, ರೈಲು ನಿಲ್ದಾಣ ಕೆಲವು ಕಡೆಗಳಲ್ಲಿ 24 ಗಂಟೆಯೂ ಹೋಟೆಲ್ ತೆರೆದಿರಲಿದ್ದು, ಜನರಿಗೆ ಅಗತ್ಯವಿರುವ ಪ್ರದೇಶಗಳಲ್ಲಿ ಹೋಟೆಲ್ ಗಳನ್ನು ತೆರೆಯಲು ಮನವಿ ಮಾಡಲಾಗಿದೆ.