Daring Elk: ದಾಳಿಗೆ ಬಂದ ನಾಯಿಗೆ ಪ್ರತಿದಾಳಿಯ ಎಚ್ಚರಿಕೆ ಕೊಟ್ಟ ಕಡವೆ!

ಹೊನ್ನಾವರ: ಸಾಮಾನ್ಯವಾಗಿ ನಾಯಿಗಳನ್ನು ಕಂಡರೆ ಕಾಡು ಪ್ರಾಣಿಗಳು ತಮ್ಮ ಪ್ರಾಣಕ್ಕೆ ಅಪಾಯವಾಗದಿರಲಿ ಎಂದು ದೂರಕ್ಕೆ ಓಡಿ ಹೋಗುತ್ತವೆ. ಆದರೆ ಇಲ್ಲೊಂದು ಕಡೆ ಕಡವೆಯೊಂದು ಮುಖಾಮುಖಿ ನಿಂತು ನಾಯಿಗಳೇ ಬೆದರಿಸಿ ಸವಾಲೊಡ್ಡಿದೆ. ಇಂತಹದ್ದೊಂದು ಅಪರೂಪದ ದೃಶ್ಯಾವಳಿ…

ಹೊನ್ನಾವರ: ಸಾಮಾನ್ಯವಾಗಿ ನಾಯಿಗಳನ್ನು ಕಂಡರೆ ಕಾಡು ಪ್ರಾಣಿಗಳು ತಮ್ಮ ಪ್ರಾಣಕ್ಕೆ ಅಪಾಯವಾಗದಿರಲಿ ಎಂದು ದೂರಕ್ಕೆ ಓಡಿ ಹೋಗುತ್ತವೆ. ಆದರೆ ಇಲ್ಲೊಂದು ಕಡೆ ಕಡವೆಯೊಂದು ಮುಖಾಮುಖಿ ನಿಂತು ನಾಯಿಗಳೇ ಬೆದರಿಸಿ ಸವಾಲೊಡ್ಡಿದೆ. ಇಂತಹದ್ದೊಂದು ಅಪರೂಪದ ದೃಶ್ಯಾವಳಿ ಹೊನ್ನಾವರದಲ್ಲಿ ಕಂಡು ಬಂದಿದೆ.

ತಾಲ್ಲೂಕಿನ ಗ್ರಾಮದ ಚಿತ್ತಾರದ ಬಳಿ ಕಡವೆಯೊಂದು ಅರಣ್ಯದಿಂದ ದಾರಿ ತಪ್ಪಿ ತೋಟದತ್ತ ಬಂದಿತ್ತು. ಕಡವೆಯನ್ನು ಕಂಡ ನಾಯಿಯೊಂದು ಜೋರಾಗಿ ಬೊಗಳುತ್ತಾ ಓಡಿಸಿಕೊಂಡು ಬಂದಿದ್ದು, ಈ ವೇಳೆ ಕಡವೆ ಗಾಬರಿಗೊಂಡು ತೋಟದೊಳಕ್ಕೆ ಓಡಿದೆ. ಈ ವೇಳೆ ನಾಯಿ ಬೆನ್ನು ಬಿಡದೇ ಓಡಿಸಿಕೊಂಡು ಬಂದಿದ್ದನ್ನು ಕಂಡ ಕಡವೆ ಕೊನೆಗೆ ತೋಟದೊಳಗೆ ಹರಿಯುತ್ತಿದ್ದ ಹಳ್ಳವೊಂದರ ಬಳಿ ತಿರುಗಿ ನಿಂತು ಪ್ರತಿದಾಳಿಗೆ ಸಿದ್ಧವಾಗಿದೆ.

ಕೊಂಚ ದೂರದಲ್ಲಿ ನಿಂತ ನಾಯಿ ಕಡವೆಯತ್ತ ಬೊಗಳುತ್ತಾ ಬೆದರಿಸಿದೆ. ಆದರೆ ಈ ವೇಳೆ ಕಡವೆ ನೀರಿನಲ್ಲಿ ತನ್ನ ಮುಂಗಾಲನ್ನು ಜೋರಾಗಿ ಅಪ್ಪಳಿಸಿ ಸದ್ದು ಮಾಡಿ ನಾಯಿಗೇ ಸವಾಲೊಡ್ಡಿದೆ. ನಾಯಿ ಎಷ್ಟೇ ಬೊಗಳಿದರೂ ಹಿಂದೆ ಸರಿಯದ ಕಡವೆ ಮತ್ತೆ ಮತ್ತೆ ತನ್ನ ಮುಂಗಾಲನ್ನು ಬಡಿಯುತ್ತಾ ನಾಯಿಗೆ ಪ್ರತಿದಾಳಿಯ ಎಚ್ಚರಿಕೆಯನ್ನು ನೀಡಿದ್ದು, ಈ ಅಪರೂಪದ ದೃಶ್ಯಾವಳಿಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

Vijayaprabha Mobile App free

ಬಳಿಕ ಕಡವೆಗೆ ಯಾವುದೇ ತೊಂದರೆ ಉಂಟಾಗದಂತೆ ನಾಯಿಯನ್ನು ಓಡಿಸಿದ ಸ್ಥಳೀಯರು ಕಡವೆ ಮತ್ತೆ ಅರಣ್ಯಕ್ಕೆ ವಾಪಸ್ಸಾಗಲು ಅನುವು ಮಾಡಿಕೊಟ್ಟಿದ್ದಾರೆ. ಸದ್ಯ ನಾಯಿಗೆ ಸವಾಲೆಸೆದ ಕಡವೆಯ ಈ ಅಪರೂಪ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.

ವೀಡಿಯೋ‌ ನೋಡಿ:

Video of Elk giving warning to the dog
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.