ಬೆಂಗಳೂರಿನಲ್ಲಿ ಭಾರೀ ಮಳೆ; ಎಲ್ಲೆಲ್ಲಿ ಮಳೆ?

Heavy rain : ಬೆಂಗಳೂರಿನ ಹಲವೆಡೆ ಇಂದು ಸಂಜೆಯಾಗುತ್ತಿದ್ದಂತೆ ಮತ್ತೆ ಮಳೆರಾಯ (Heavy rain) ಅಬ್ಬರಿಸಿದ್ದಾನೆ. ಹೌದು, ನಗರದ ರಿಚ್‌ಮಂಡ್‌ ಟೌನ್‌, ಶಾಂತಿ ನಗರ, ವಿಲ್ಸನ್‌ ಗಾರ್ಡನ್‌ ಮತ್ತು ವಿಧಾನಸೌಧದ ಬಳಿ ಧಾರಾಕಾರ ಮಳೆ…

Heavy rain in Bangalore

Heavy rain : ಬೆಂಗಳೂರಿನ ಹಲವೆಡೆ ಇಂದು ಸಂಜೆಯಾಗುತ್ತಿದ್ದಂತೆ ಮತ್ತೆ ಮಳೆರಾಯ (Heavy rain) ಅಬ್ಬರಿಸಿದ್ದಾನೆ.

ಹೌದು, ನಗರದ ರಿಚ್‌ಮಂಡ್‌ ಟೌನ್‌, ಶಾಂತಿ ನಗರ, ವಿಲ್ಸನ್‌ ಗಾರ್ಡನ್‌ ಮತ್ತು ವಿಧಾನಸೌಧದ ಬಳಿ ಧಾರಾಕಾರ ಮಳೆ ಸುರಿದಿದ್ದು, ಬೆಂಗಳೂರಿನ ನಿವಾಸಿಗಳಿಗೆ ಮತ್ತಷ್ಟು ಆತಂಕ ಮೂಡಿಸಿದೆ.

ಸಂಜೆಯಿಂದಲೇ ಆರಂಭಗೊಂಡಿರುವ ಮಳೆ, ರಿಚ್‌ಮಂಡ್‌ ಟೌನ್‌ ಬಳಿ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡಿದ್ದಾರೆ. ಇನ್ನು ರಿಚ್‌ಮಂಡ್‌ ಟೌನ್‌ನಲ್ಲಿ ಭಾರೀ ಮಳೆಗೆ ಮರದ ಕೊಂಬೆಗಳು ರಸ್ತೆಗೆ ಬಿದ್ದಿವೆ.

Vijayaprabha Mobile App free

Heavy rain : ಬೆಂಗಳೂರಿನಲ್ಲಿ ಎಲ್ಲೆಲ್ಲಿ ಮಳೆ?

ಬೆಂಗಳೂರಿನಲ್ಲಿ ಇಂದು ವಿಧಾನಸೌಧ, ಕೆ.ಆರ್.ಸರ್ಕಲ್‌, ಮೈಸೂರು ಬ್ಯಾಂಕ್ ಸರ್ಕಲ್​, ಮೆಜೆಸ್ಟಿಕ್‌, ಕೆ.ಆರ್‌.ಮಾರ್ಕೆಟ್‌, ಕಾರ್ಪೊರೇಷನ್ ಸರ್ಕಲ್​, ಶಾಂತಿನಗರ, ರಿಚ್ಮಂಡ್‌ ಸರ್ಕಲ್‌, ಡಾಲರ್ಸ್ ಕಾಲೋನಿ, ಹೆಬ್ಬಾಳ, ಸಂಜಯ್ ನಗರ, ಬಿಇಎಲ್ ರೋಡ್, ಎಂಎಸ್ ರಾಮಯ್ಯ ಆಸ್ಪತ್ರೆ ಸೇರಿದಂತೆ ಹಲವೆಡೆ ಭಾರೀ ಮಳೆ ಆಗಿದೆ.

ಕೆಂಗೇರಿ ಸುತ್ತಮುತ್ತ ಇಂದು ಸಂಜೆ 4 ಗಂಟೆಗೆ ಮಳೆ ಆರಂಭವಾಗಿದ್ದರೆ, ಜಯನಗರ 7ನೇ ಹಂತದಲ್ಲಿ ಸುಮಾರು 30 ನಿಮಿಷದಿಂದ ಜೋರು ಗಾಳಿ ಜೊತೆಗೆ ಧಾರಾಕಾರ ಮಳೆ ಸುರಿದಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.