ನಟಿಸಲು ಚಾನ್ಸ್ ಕೇಳಲು ಹೋದರೆ, ತನ್ನ ಅಸೆ ತೀರಿಸಬೇಕು ಎಂದು ಕೇಳಿದ್ದರು; ದಕ್ಷಿಣದ ನಿರ್ದೇಶಕರ ಮೇಲೆ ಹಿಂದಿ ನಟಿ ಆರೋಪ

ಮುಂಬೈ : ‘ದಿಲ್ ಟು ಹ್ಯಾಪಿ ಹೈ ಗೀ’ ಧಾರಾವಾಹಿ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ್ದ ಟಿವಿ ನಟಿ ಡೊನಾಲ್ ಬಿಶ್ತ್ ತಮ್ಮ ನಟನೆಯ ಮೂಲಕ ಸರಣಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತ ಉತ್ತಮ ಫಾರ್ಮ್ ನಲ್ಲಿದ್ದಾರೆ. ಪತ್ರಕರ್ತರಾಗಿದ್ದ…

Donal Bisht vijayaprabha

ಮುಂಬೈ : ‘ದಿಲ್ ಟು ಹ್ಯಾಪಿ ಹೈ ಗೀ’ ಧಾರಾವಾಹಿ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ್ದ ಟಿವಿ ನಟಿ ಡೊನಾಲ್ ಬಿಶ್ತ್ ತಮ್ಮ ನಟನೆಯ ಮೂಲಕ ಸರಣಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತ ಉತ್ತಮ ಫಾರ್ಮ್ ನಲ್ಲಿದ್ದಾರೆ. ಪತ್ರಕರ್ತರಾಗಿದ್ದ ಡೊನಾಲ್ ಬಿಶ್ತ್ ನಟನೆ ಮೇಲೆ ಆಸಕ್ತಿಯಿಂದ ಈ ಕ್ಷೇತ್ರಕ್ಕೆ ಪ್ರವೇಶಿಸಿದರು. ಪ್ರಸ್ತುತ ಯಶಸ್ವಿಯಾಗಿ ವೃತ್ತಿಜೀವನವನ್ನು ಅನುಭವಿಸುತ್ತಿರುವ ಡೊನಾಲ್ ಬಿಶ್ತ್, ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ತಾವು ಅನುಭವಿಸಿದ ಭಯಾನಕ ಅನುಭವಗಳನ್ನು ಇಂಗ್ಲಿಷ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

‘ ಆರಂಭದಲ್ಲಿ ಒಂದು ಶೋಗೆ ನನ್ನನ್ನು ಆಯ್ಕೆ ಮಾಡಲಾಯಿತು. ಸಂಭಾವನೆಯನ್ನು ಸಹ ಅಂತಿಮಗೊಳಿಸಿದ ನಂತರ ನನ್ನನ್ನು ಆ ಪ್ರಾಜೆಕ್ಟ್ ನಿಂದ ಬೇರೆ ನಟಿಯನ್ನು ನೇಮಿಸಿಕೊಂಡರು. ಇದರಿಂದ ಮುಂಬೈ ಇಂಡಸ್ಟ್ರಿ ಅಂದ್ರೇನೆ ನಕಲಿ, ವಂಚನೆ ಎಂಬ ಅಭಿಪ್ರಾಯಕ್ಕೆ ಕಾರಣವಾಯಿತು. ಆದರೂ ಕೂಡ ನಟನೆಯ ಮೇಲೆ ಇರುವ ಆಸಕ್ತಿಯಿಂದ ಆಡಿಷನ್‌ಗೆ ಹೋಗುವುದನ್ನು ಮುಂದುವರಿಸಿದೆ.

‘ಈ ಹಿನ್ನೆಲೆಯಲ್ಲಿಯೇ ನಾನು ದಕ್ಷಿಣ ಸಿನಿಮಾರಂಗದ ಒಬ್ಬ ನಿರ್ದೇಶಕರನ್ನು ಭೇಟಿಯಾಗಿದ್ದೆ. ಅವರು ನನಗೆ ಒಂದು ಅವಕಾಶವನ್ನು ನೀಡುತ್ತೇನೆ ಎಂದು, ಅದರ ಪ್ರತಿಫಲವಾಗಿ ಅವರು ತಮ್ಮೊಂದಿಗೆ ಒಂದು ರಾತ್ರಿ ಕಳೆಯಲು ನನ್ನನ್ನು ಕೇಳಿದ್ದರು. ನಿರ್ದೇಶಕನ ಆ ಮಾತುಗಳಿಂದ ಶಾಕ್ ಆಗಿ ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ಅವಕಾಶಗಳಿಗಾಗಿ ಅಂತ ಕೆಲಸಕ್ಕೆ ಇಳಿಯುವ ವ್ಯಕ್ತಿತ್ವ ನನ್ನದಲ್ಲ. ತಿರುಗಿ ಮತ್ತೆ ಹಿಂದಿ ಉದ್ಯಮದಲ್ಲಿಯೇ ಹಲವಾರು ಪ್ರಯತ್ನಗಳನ್ನು ಮಾಡಿದ ನಂತರ ನನಗೆ ಅವಕಾಶಗಳು ಬಂದವು. ಸರಿಯಾದ ಮಾರ್ಗದಲ್ಲೇ ಇಲ್ಲಿ ಪ್ರವೇಶಿಸಿದೆ. ನನ್ನ ಪ್ರತಿಭೆ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ ”ಎಂದು ಡೊನಾಲ್ ಬಿಶ್ಟ್ ಹೇಳಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.