ರಷ್ಯಾ-ಉಕ್ರೇನ್ ಯುದ್ಧದಿಂದ ಕಚ್ಚಾ ತೈಲ ಬೆಲೆಯು ಕಳೆದ 7 ತಿಂಗಳಿನಿಂದ ಏರುತ್ತಲೇ ಇತ್ತು. ಆದರೆ ಇದೇ ಮೊದಲ ಬಾರಿಗೆ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 92.84 ಡಾಲರ್ ಗೆ ಕುಸಿದಿದೆ.
ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪೆಟ್ರೋಲ್ & ಡೀಸಲ್ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿಯಬಹುದೆಂಬ ಆಶಾಭಾವನೆ ಮೂಡಿದೆ. ಆದರೆ ಕಚ್ಚಾ ತೈಲ ಬೆಲೆ ಏರಿದ್ದಾಗಲೂ ದರ ಹೆಚ್ಚಳ ಮಾಡಿರಲಿಲ್ಲ. ಹಾಗಾಗಿ ಬೆಲೆ ಕಡಿಮೆ ಇರುವ ಈ ವೇಳೆ ತೈಲ ಕಂಪನಿಗಳು ಬೆಲೆ ಕಡಿಮೆ ಮಾಡದೆ ನಷ್ಟ ಸರಿದೂಗಿಸಲು ಯೋಚಿಸಿವೆ ಎನ್ನಲಾಗುತ್ತಿದೆ.
ಇನ್ನು, ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಕಾಣುತ್ತಿದ್ದು, ಕೆಲ ತಿಂಗಳುಗಳಿಂದ ಇಂಧನ ದರದಲ್ಲಿ ಯಾವುದೇ ಏರಿಳಿತವಾಗಿಲ್ಲ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಅಲ್ಪ ವ್ಯತ್ಯಾಸವಾಗಿದ್ದು, ಪ್ರಮುಖ ಜಿಲ್ಲೆಗಳ ಇಂಧನ ದರ ಹೀಗಿದೆ.
ಪೆಟ್ರೋಲ್: ಬೆಂಗಳೂರು – ರೂ. 101.94, ದ.ಕನ್ನಡ – ರೂ. 101.15 (70 ಪೈಸೆ ಇಳಿಕೆ), ಮೈಸೂರು – ರೂ. 102.17 (67 ಪೈಸೆ ಏರಿಕೆ), ಬೆಳಗಾವಿ – ರೂ. 102.38 (9 ಪೈ.ಇಳಿಕೆ), ಉತ್ತರ ಕನ್ನಡ – ರೂ. 102.14 (2 ರೂ. 16 ಪೈ ಇಳಿಕೆ) ಕನಿದ್ದು, ಡೀಸೆಲ್ ದರ ಯತಾಸ್ಥಿತಿ ಕಾಯ್ದುಕೊಂಡಿದೆ.
ಇಂದಿನ ಚಿನ್ನ, ಬೆಳ್ಳಿ ದರ
ದೇಶದ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ದರ ಬದಲಾವಣೆಯಾಗದೆ ಸ್ಥಿರವಾಗಿದ್ದು, ಬೆಳ್ಳಿ ದರ ಮಾತ್ರ ಇಳಿಕೆಯಾಗಿದ್ದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 46,750 ರೂ ಆಗಿದ್ದು, 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 51,000 ರೂ ದಾಖಲಾಗಿದ್ದು,1 ಕೆಜಿ ಬೆಳ್ಳಿ ಬೆಲೆ ಬರೋಬ್ಬರಿ 5,400 ರೂ ಇಳಿಕೆಯಾಗಿ 55,000 ರೂ ಆಗಿದೆ.
ಇನ್ನು, ಬೆಂಗಳೂರಿನಲ್ಲಿ 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 46,800 ರೂ ಆಗಿದ್ದು, 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 51,050 ರೂ ದಾಖಲಾಗಿದೆ.