ಆಗಸ್ಟ್ 12ರಿಂದ ರಾಜ್ಯದಲ್ಲಿ ಬಿಡುವು ನೀಡಿರುವ ಮಳೆ, ಆ.23 ರಿಂದ ಮತ್ತೆ ಅಬ್ಬರಿಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದ್ದಾರೆ.
ಹೌದು, ಈ ತಿಂಗಳ ಮೊದಲ ವಾರದಲ್ಲಿ ಸುರಿದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಕೆಲವೆಡೆ ಭೂಕುಸಿತ, ಸಂಚಾರ ಕಡಿತ, ಮನೆ ಕುಸಿತ, ಜೀವ ಹಾನಿ, ಬೆಳೆ ನಷ್ಟ ಸಂಭವಿಸಿತ್ತು. ಅಂತಹದ್ದೇ ನೈಸರ್ಗಿಕ ಹಾನಿ ಕೊನೆ ವಾರದಲ್ಲಿ ಸುರಿಯುವ ಮಳೆಯಿಂದ ಸಂಭವಿಸಲಿದೆ ಎಂದು ಅವರು ಹೇಳಿದ್ದಾರೆ.
ಇನ್ನು, ಕೆಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ ಮಳೆ ಇದೀಗ ಕೊಂಚ ಬಿಡುವು ನೀಡಿದ್ದು, ಒಂದೆರಡು ಜಿಲ್ಲೆಗಳಲ್ಲಿ ಮಾತ್ರ ಎಂದಿನಂತೆ ಮಳೆ ಮುಂದುವರೆಯಲಿದೆ. ಮುಂಜಾನೆ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿವಿಧ ನಗರಗಳ ಇಂದಿನ ತಾಪಮಾನ:
ಬೆಂಗಳೂರು: 29-19
ದಾವಣಗೆರೆ: 29-21
ಚಿತ್ರದುರ್ಗ: 29-20
ಹಾವೇರಿ: 29-21
ಬಳ್ಳಾರಿ: 33-23
ಗದಗ: 29-21
ಕೊಪ್ಪಳ: 32-22
ರಾಯಚೂರು: 32-23
ಯಾದಗಿರಿ: 31-22
ವಿಜಯಪುರ: 30-21
ಬೀದರ್: 28-21
ಕಲಬುರಗಿ: 31-22
ಬಾಗಲಕೋಟೆ: 31-22
ಮಂಗಳೂರು: 29-24
ಶಿವಮೊಗ್ಗ: 28-21
ಬೆಳಗಾವಿ: 26-19
ಮೈಸೂರು: 31-20
ಮಂಡ್ಯ: 31-21
ಕೊಡಗು: 25-17
ರಾಮನಗರ: 31-21
ಹಾಸನ: 27-19
ಚಾಮರಾಜನಗರ:31-21
ಚಿಕ್ಕಬಳ್ಳಾಪುರ: 29-19
ಕೋಲಾರ: 31-21
ತುಮಕೂರು: 29-20
ಉಡುಪಿ: 29-24
ಚಿಕ್ಕಮಗಳೂರು:26-18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.