(Vikeypedia) ನಾನು ನಂದಿನಿ ವಿಡಿಯೋ ಮೂಲಕ ರಾಜ್ಯಾದ್ಯಂತ ಖ್ಯಾತಿ ಪಡೆದುಕೊಂಡಿದ್ದ ವಿಕಿಪೀಡಿಯ ವಿಕಾಸ್ ತಮಾಷೆಗಾಗಿ ಮಾಡಿದ ವಿಡಿಯೋವೊಂದರಿಂದ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿತ್ತು ಎಂದು ಹೇಳಲಾಗಿದೆ.
ಹೌದು, ವಿಕಾಸ್ ಹಾಗೂ ಅಮಿತ್ ಚಿಟ್ಟೆ ನೇತೃತ್ವದ ವಿಕಿಪೀಡಿಯ ತಂಡ ತಮ್ಮ ಕ್ರಿಯೇಟಿವ್ ವಿಡಿಯೋಗಳಿಗೆ ಹೆಚ್ಚು ಹೆಸರುವಾಸಿಯಾದವರು. ಅವರ ಟೀಮ್ ಟ್ರೆಂಡಿಂಗ್ ಗೆ ತಕ್ಕಂತೆ ವಿಡಿಯೋಗಳನ್ನ ಮಾಡಿ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಜೊತೆಗೆ ಆನ್ ಲೈನ್ ಗೇಮ್ ಗಳಿಂದಾವು ಅವಾಂತರಗಳನ್ನು ತಮ್ಮದೇ ಆದ ಕಾಮಿಡಿ ವಿಡಿಯೋ ಮೂಲಕ ಜನರಿಗೆ ತಲುಪಿಸಿ ಜನಮನ್ನಣೆ ಪಡೆದಿಕೊಂಡಿದ್ದರು.
ಆದರೆ, ಈ ಜೋಡಿ ಇತ್ತೀಚೆಗೆ ಮಾಡಿಕೊಂಡ ಎಡವಟೊಂದು ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿತ್ತು ಎಂದು ಹೇಳಲಾಗಿದೆ. ವಿಕಾಸ್ ಹಾಗೂ ಅಮಿತ್, ಯುವ ಜನತೆ ಖುಷಿಯಾಗಿರಲು ಏನು ಮಾಡುತ್ತಾರೆ ಎಂಬ ಟಾಪಿಕ್ ಇಟ್ಟುಕೊಂಡು ಒಂದು ವಿಡಿಯೋ ಮಾಡಿತ್ತು. ಇದರ ಕೊನೆಯಲ್ಲಿ ವಿಕಾಸ್ ಸಿರಂಜ್ ಹಿಡಿದುಕೊಂಡು ಡ್ರಗ್ಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದೆ ಈ ಎಡವಟ್ಟಿಗೆ ಕಾರಣ.
ಈ ವಿಡಿಯೋವನ್ನು ಗಮನಿಸಿದ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಇವರುಗಳನ್ನು ಠಾಣೆಗೆ ಕರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಅಲ್ಲಿಯೇ Vickypedia ಪೇಜಿನಲ್ಲಿ ಅಪ್ಲೋಡ್ ಮಾಡಲಾಗಿದ್ದ ಸಂಬಂಧಪಟ್ಟ ವಿಡಿಯೋವನ್ನು ಡಿಲೀಟ್ ಮಾಡಿಸಲಾಗಿದೆ ಎಂದು ಹೇಳಲಾಗಿದೆ