ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದಿನಿಂದ ಸೆ.15ರವರೆಗೆ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಪೈಕಿ ಇಂದು ಕರಾವಳಿಯಲ್ಲಿ ಅತೀ ಭಾರಿ ಮಳೆಯಾಗುವ ಸಂಭವವಿದ್ದು, 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಬಳಿಕ 2 ದಿನ ಮಳೆ ಇಳಿಕೆಯಾಗಲಿದೆ. ಇಂದು 1 ದಿನ ಮಾತ್ರ ಬೆಳಗಾವಿ, ಬೀದರ್, ಕಲಬುರಗಿ, ವಿಜಯಪುರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿವಿಧ ನಗರಗಳ ಹವಾಮಾನ ವರದಿ:
ಬೆಂಗಳೂರು : 28-19, ಮಂಗಳೂರು : 28-24, ಶಿವಮೊಗ್ಗ: 27-21, ಬೆಳಗಾವಿ : 25-21, ಮೈಸೂರು : 28-20 ಮಂಡ್ಯ : 30-20 ಕೊಡಗು : 23-18, ರಾಮನಗರ: 31-24 ಹಾಸನ : 26-19, ಚಾಮರಾಜನಗರ: 29-30, ಕೊಪ್ಪಳ : 29-22 , ರಾಯಚೂರು : 31-23, ಯಾದಗಿರಿ : 30-22 ವಿಜಯಪುರ : 29-22, ಬೀದರ್ : 27-21, ಕಲಬುರಗಿ : 29-22, ಬಾಗಲಕೋಟೆ : 30-22 ಡಿಗ್ರಿ ಸೆಲಿಸ್ಯಾಸ್ ಇರಲಿದೆ.