ಆಧಾರ್ ಅಪ್ಡೇಟ್ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಉಚಿತವಾಗಿ ಆಧಾರ್ ನವೀಕರಣ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರ ಡಿಸೆಂಬರ್ 14ರವರೆಗೆ ವಿಸ್ತರಿಸಿದೆ. ಪ್ರಸ್ತುತ ದೇಶಾದ್ಯಂತ 140 ಕೋಟಿ ಆಧಾರ್ ಕಾರ್ಡ್‌ಗಳಿವೆ. ಇವರಲ್ಲಿ 100 ಕೋಟಿ 50 ಲಕ್ಷ ಜನರು ಮಾತ್ರ ತಮ್ಮ…

aadhar card vijayaprbha

ನವದೆಹಲಿ: ಉಚಿತವಾಗಿ ಆಧಾರ್ ನವೀಕರಣ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರ ಡಿಸೆಂಬರ್ 14ರವರೆಗೆ ವಿಸ್ತರಿಸಿದೆ. ಪ್ರಸ್ತುತ ದೇಶಾದ್ಯಂತ 140 ಕೋಟಿ ಆಧಾರ್ ಕಾರ್ಡ್‌ಗಳಿವೆ.

ಇವರಲ್ಲಿ 100 ಕೋಟಿ 50 ಲಕ್ಷ ಜನರು ಮಾತ್ರ ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿದ್ದಾರೆ. ಈ ಮೊದಲು‌ ಕೆಂದ್ರ ಸರ್ಕಾರ ಸೆಪ್ಟೆಂಬರ್ 14ರ ಗಡುವು ನಿಗದಿಪಡಿಸಿತ್ತು. ಆದರೆ ಇದೀಗ ಡಿಸೆಂಬರ್ 14ರೊಳಗೆ ಯಾವುದೇ ಶುಲ್ಕವಿಲ್ಲದೆ ಆಧಾರ್ ಅಪ್ ಡೇಟ್ ಮಾಡುವ ಸೌಲಭ್ಯ ಕಲ್ಪಿಸಿದೆ. ಭಾರತದಲ್ಲಿ ಯಾವುದೇ ವ್ಯಕ್ತಿ, ವಯಸ್ಸು ಅಥವಾ ಲಿಂಗವನ್ನು ಲೆಕ್ಕಿಸದೆ, ನವಜಾತ ಶಿಶುವಿನಿಂದ ಹಿಡಿದು ಪ್ರತಿಯೊಬ್ಬರಿಗೂ ಆಧಾರ್ ಸಂಖ್ಯೆ ಅತ್ಯಗತ್ಯವಾಗಿದೆ. ಈ ಮೂಲಕ ಆ ವ್ಯಕ್ತಿಯ ಬಗ್ಗೆ ಎಲ್ಲ ಮಾಹಿತಿ ಪಡೆಯಬಹುದು.

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಕೇವಲ ಒಂದು ಆಧಾರ್ ಸಂಖ್ಯೆಯನ್ನು ನೀಡಬಹುದು. ಆಧಾರ್ ಕಾರ್ಡ್ ಭಾರತೀಯ ಪ್ರಜೆಯ ಹೆಸರು, ಜನ್ಮ ದಿನಾಂಕ, ಲಿಂಗ, ವಸತಿ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯಂತಹ ಮಾಹಿತಿಯನ್ನು ಒಳಗೊಂಡಿದೆ. ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಸಂಖ್ಯೆಯನ್ನು ನವೀಕರಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರವು ಕಡ್ಡಾಯಗೊಳಿಸಿದೆ. ಇದಕ್ಕಾಗಿ, ನಾಗರಿಕರು ತಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರದ ಮೂಲಕ ಅಥವಾ https://myaadhaar.uidai.gov.in ವೆಬ್‌ಸೈಟ್ ಮೂಲಕ ತಮ್ಮ ಆಧಾರ್ ಅನ್ನು ನವೀಕರಿಸಬಹುದು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.