ಇಂದಿನಿಂದ ಸೆ.9ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಕೊಡಗು, ಶಿವಮೊಗ್ಗ, ಉ.ಕ, ದ.ಕ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಹಳದಿ ಅಲರ್ಟ್ ನೀಡಲಾಗಿದೆ.
ಸೆ.7ರಿಂದ 9ರವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಿಗೆ ಕೂಡ ಈ ಮೂರು ದಿನ ಹಳದಿ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ 4 ದಿನ ಯೆಲ್ಲೋ ಅಲರ್ಟ್ ಇರಲಿದೆ.
ಇನ್ನು, ಭಾರೀ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದೆ. ರಸ್ತೆಗಳೆಲ್ಲಾ ನೀರಿನಿಂದ ತುಂಬಿದ್ದು, ಜನರ ಪರಿಸ್ಥಿತಿ ಅಸ್ತವ್ಯಸ್ತವಾಗಿದ್ದು, ಇದರ ಬೆನ್ನಲ್ಲೇ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಬೆಂಗಳೂರಿನಲ್ಲಿ ಇನ್ನೂ ಸ್ವಲ್ಪ ದಿನಗಳ ಕಾಲ ಭಾರೀ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ.
ವಿವಿಧ ನಗರ ಹವಾಮಾನ ವರದಿ:
ಬೆಂಗಳೂರು: 29-21, ಮಂಗಳೂರು: 28-24, ಶಿವಮೊಗ್ಗ: 28-21, ಬೆಳಗಾವಿ: 27-21, ಮೈಸೂರು: 29-21,ಮಂಡ್ಯ: 27-21,ಕೊಡಗು: 23-18, ರಾಮನಗರ: 29-21, ಹಾಸನ: 27-19, ಚಾಮರಾಜನಗರ: 28-21 , ಚಿಕ್ಕಬಳ್ಳಾಪುರ: 28-20, ಕೋಲಾರ: 29-21, ತುಮಕೂರು: 28-21, ಉಡುಪಿ: 28-24, ಕಾರವಾರ: 29-25, ಚಿಕ್ಕಮಗಳೂರು: 26-19, ದಾವಣಗೆರೆ: 29-21, ಚಿತ್ರದುರ್ಗ: 28-21, ಹಾವೇರಿ: 28-21, ಬಳ್ಳಾರಿ: 31-23, ಗದಗ: 29-22, ಕೊಪ್ಪಳ: 29-23, ರಾಯಚೂರು: 31-24, ಯಾದಗಿರಿ: 32-24, ವಿಜಯಪುರ: 29-22, ಬೀದರ್: 28-22, ಕಲಬುರಗಿ: 31-23, ಬಾಗಲಕೋಟೆ: 30-23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.