ಪ್ರಧಾನಿ ಮೋದಿ ಕೊಟ್ಟ ಮಾತನ್ನು ಈಡೇರಿಸಿದ್ದಾರೆಯೇ? ರೈತರ ವಿಷಯದಲ್ಲಿ ಆಗಿದ್ದೇನು..?

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ರೈತರ ವರಮಾನ ದ್ವಿಗುಣ ಮಾತು ನಿಜ ಮಾಡಿದ್ದಾರಾ? ಎಸ್‌ಬಿಐ ವರದಿಯ ಪ್ರಕಾರ, ಮೋದಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೌದು, ಕಳೆದ ಐದು…

farmer vijayaprabha news1

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ? ರೈತರ ವರಮಾನ ದ್ವಿಗುಣ ಮಾತು ನಿಜ ಮಾಡಿದ್ದಾರಾ? ಎಸ್‌ಬಿಐ ವರದಿಯ ಪ್ರಕಾರ, ಮೋದಿ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೌದು, ಕಳೆದ ಐದು ವರ್ಷಗಳಲ್ಲಿ ನೋಡಿದರೆ ರೈತರ ಆದಾಯ ದ್ವಿಗುಣ ಆಗಿದೆ ಎಸ್‌ಬಿಐ ವರದಿ ಹೇಳಿದೆ.

2017-18 ರಿಂದ 2021-22 ಆರ್ಥಿಕ ಸಂವತ್ಸರದ ವರೆಗೆ ನೋಡಿದರೆ ರೈತರ ಆದಾಯ ಹೆಚ್ಚುತ್ತಿದೆ. 1.3 ರಿಂದ 1.7 ರೆಟುಗಳವರೆಗೆ ರೈತರ ಆದಾಯ ಹೆಚ್ಚಿದೆ. ಮಹಾರಾಷ್ಟ್ರದಲ್ಲಿ ಸೋಬಾಬೀನ್ ಸಾಗುವಳಿ ಮಾಡುತ್ತಿರುವ ರೈತರು, ಕರ್ನಾಟಕದಲ್ಲಿ ಹತ್ತಿ ಬೆಳೆಯುತ್ತಿರುವ ರೈತರ ಆದಾಯ ಡಬಲ್ ಆಗಿದ್ದು, ಅದೇ ಸಮಯದಲ್ಲಿ ಆಹಾರ ಧಾನ್ಯಗಳ ಏರುಗತಿ ಕೂಡ 50 ಬಿಲಿಯನ್ ಡಾಲರ್ ಮೇಲಕ್ಕೆ ಸೇರಿದೆ ಎಂದು ವಿವರಿಸಿದೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ ಕೂಡ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಇವುಗಳ ಪ್ರಕಾರ ಕೃಷಿ ಕ್ಷೇತ್ರದವರ ಆದಾಯ ಹೆಚ್ಚಿರುವುದನ್ನು ಕಾಣಬಹುದು. ಕಳೆದ ಆರು ವರ್ಷಗಳಲ್ಲಿ ರೈತರ ಆದಾಯ ಶೇ.59 ರಷ್ಟು ಏರಿಕೆಯಾಗಿ ರೂ. 10,218 ತಲುಪಿದೆ. ರೈತರ ಆದಾಯ ಹೆಚ್ಚಳಕ್ಕೆ ನಾಲ್ಕು ಪ್ರಮುಖ ಅಂಶಗಳು ಕಾರಣವಾಗಿವೆ ಎಂದು ಹೇಳಬಹುದು. ಅವು ಯಾವುವೆಂದರೆ,

Vijayaprabha Mobile App free

* ಕನಿಷ್ಠ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಂಬಲ
* ಅನ್ನದಾತರ ಆಲೋಚನೆಗಳೂ ಬದಲಾಗಿವೆ. ಹಿಂದೆ ಒಂದೇ ಬೆಳೆಯನ್ನು ಹೊಂದಿದ್ದ ರೈತರು ಈಗ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
* ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಆರ್ಥಿಕ ಸ್ವಾತಂತ್ರ್ಯ
* ಹೆಚ್ಚು ಲಾಭದಾಯಕ ಬೆಳೆಗಳ ಕೃಷಿಗೆ ಹೊತ್ತು

ಕಿಸಾನ್ ಕ್ರೆಡಿಟ್ ಕಾರ್ಡ್‌ ತುಂಬಾ ಒಳ್ಳೆಯದು:

ಸರಕಾರ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಅನ್ನದಾತರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಇದು ಆರ್ಥಿಕವಾಗಿ ಸ್ಥಿರವಾಗಲು ಸಹಾಯ ಮಾಡುತ್ತದೆ. ಈ ಕಾರ್ಡ್ ಹೊಂದಿರುವವರು ಸುಲಭವಾಗಿ ಬ್ಯಾಂಕ್ ನಿಂದ ಸಾಲ ಪಡೆಯಬಹುದು. ಈಗಾಗಲೇ ಹಲವು ಮಂದಿ ಬ್ಯಾಂಕ್‌ಗಳಿಂದ ಕೆಸಿಸಿ ಸಾಲ ಪಡೆದಿದ್ದಾರೆ. ಸಾಲವನ್ನು ಸಕಾಲದಲ್ಲಿ ಪಾವತಿಸಿದರೆ, ಸಾಲಕ್ಕೆ ಶೇಕಡಾ 4 ರ ಬಡ್ಡಿದರ ಸಿಗುತ್ತದೆ. ಮತ್ತು ಸಾಲದ ಪ್ರಮಾಣವೂ ಹೆಚ್ಚುತ್ತಿದ್ದು,ಬ್ಯಾಂಕ್‌ಗೆ ಹೋಗಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಪ್ರಸ್ತುತ ಸುಮಾರು 7.37 ಕೋಟಿ ರೈತರು ಕೆಸಿಸಿ ಕಾರ್ಡ್ ಅಡಿಯಲ್ಲಿ ಸಾಲ ಪಡೆದಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.