ದಾವಣಗೆರೆ: ಕಿವುಡ-ಮೂಗ ಜೋಡಿಯ ಮಧ್ಯೆ ಚಿಗುರಿದ ಪ್ರೇಮಕ್ಕೆ ವಾಟ್ಸಪ್ ಸೇತುವೆಯಾಗಿದ್ದು, ಇಬ್ಬರನ್ನೂ ದಾಂಪತ್ಯ ಜೀವನಕ್ಕೆ ಕಾಲಿಡುವಂತೆ ಮಾಡಿದೆ.
ಹೌದು, ಹರಪನಹಳ್ಳಿ ತಾಲ್ಲೂಕಿನ 24 ವರ್ಷದ ಹೆಣ್ಣು ಅಕ್ಷತಾ ಹಾಗೂ ರಾಣೇಬೆನ್ನೂರು ತಾಲ್ಲೂಕಿನ 25 ವರ್ಷದ ಗಂಡು ಸಂಜು ವಾಲ್ಮೀಕಿ ಅವರು ಸಪ್ತಪದಿ ತುಳಿದ ಅಪರೂಪದ ಜೋಡಿಯಾಗಿದ್ದಾರೆ.
ಅಕ್ಷತಾ ಮತ್ತು ಸಂಜು ವಾಲ್ಮೀಕಿ ಇಬ್ಬರೂ ದಾವಣಗೆರೆಯ ಡಿಸಿಎಂ ಟೌನ್‌ಶಿಪ್ ಬಡಾವಣೆಯ ಮೌನೇಶ್ವರ ಕಿವುಡ ಮತ್ತು ಮೂಗರ ವಸತಿಯುತ ಶಾಲೆಯ ಮಾಜಿ ವಿದ್ಯಾರ್ಥಿಗಳಾಗಿದ್ದು, ಇದೀಗ ಹಸೆ ಮಣೆ ಏರಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.