Hanuman Jayanti : ಹನುಮ ಜಯಂತಿಯು ಭಗವಾನ್ ಹನುಮ೦ತನ ಜನ್ಮದಿನವಾಗಿದ್ದು, ಚೈತ್ರ ಮಾಸದ ಹುಣ್ಣಿಮೆಯ೦ದು ಆಚರಿಸಲಾಗುತ್ತದೆ. ಈ ದಿನ ಹನುಮಂತನ ಪೂಜೆಯಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎ೦ಬ ನ೦ಬಿಕೆಯಿದೆ. ಹನುಮಾನ್ ಜಯಂತಿಯ ಪೂಜಾ ವಿಧಿ-ವಿಧಾನವನ್ನು ಈ ಲೇಖನದಲ್ಲಿ ನೋಡೋಣ.
ಹನುಮ ಜಯಂತಿ ಯಾವಾಗ?
ಹಿಂದೂ ಕ್ಯಾಲೆಂಡರ್ ಪ್ರಕಾರ, ಹನುಮ ಜಯಂತಿ ಅಂದರೆ ಚೈತ್ರ ಮಾಸದ ಹುಣ್ಣಿಮೆ ಏಪ್ರಿಲ್ 12 ರಂದು ಬೆಳಗಿನ ಜಾವ 3:21 ಕ್ಕೆ ಪ್ರಾರಂಭವಾಗುತ್ತದೆ. ಅಲ್ಲದೆ, ದಿನಾಂಕವು ಮರುದಿನ ಏಪ್ರಿಲ್ 13 ರಂದು ಬೆಳಿಗ್ಗೆ 5:51 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ, ಏಪ್ರಿಲ್ 12 ರಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ.
ಪೂಜಾ ವಿಧಾನ
ಹನುಮ ಜಯಂತಿಯಂದು, ಹನುಮಂತನ ಜೊತೆಗೆ ರಾಮ & ಸೀತಾ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಕೆ೦ಪು ಬಟ್ಟೆ ಧರಿಸಿ. ಅದಾದ ನಂತರ, ಹನುಮಂತನಿಗೆ ಕುಂಭ, ಕೆಂಪು ಹೂವುಗಳು, ತುಳಸಿ ಎಲೆಗಳು & ಬೂಂದಿ ಲಡ್ಡುವನ್ನು ಪ್ರಸಾದವಾಗಿ ಅರ್ಪಿಸಿ. ಅದರ ನಂತರ ಮ೦ತ್ರವನ್ನು ಪಠಿಸಿ. ನಂತರ ಹನುಮಾನ್ ಚಾಲೀಸಾ ಪಠಿಸಿ. ಕೊನೆಯಲ್ಲಿ ಆರತಿ ಮಾಡಿ ಎಲ್ಲರಿಗೂ ಪ್ರಸಾದ ವಿತರಿಸಿ
ಹನುಮ ಜಯಂತಿಯ ಮಹತ್ವ
ಹಿಂದೂ ಧರ್ಮದಲ್ಲಿ, ಹನುಮ೦ತನನ್ನು 8 ಅಮರರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ. ಅವನು ಇನ್ನೂ ಭೂಮಿಯ ಮೇಲೆ ಇದ್ದಾನೆ ಎ೦ದು ಹೇಳಲಾಗುತ್ತಿದ್ದು, ಧಾರ್ಮಿಕ ನಂಬಿಕೆಯ ಪ್ರಕಾರ, ಹನುಮ ಜಯಂತಿಯ ದಿನದಂದು ಶುದ್ಧ ಮನಸ್ಸಿನಿಂದ ಪೂಜೆ ಮಾಡುವುದರಿಂದ, ಹನುಮಂತನ ಆಶೀರ್ವಾದವನ್ನು ಪಡೆಯಬಹುದು.
ಹನುಮನ ಜನನ
ಹನುಮನು ಕೇಸರಿ ಮತ್ತು ಅಂಜನಾ ದಂಪತಿಗೆ ಜನಿಸಿದಾತ. ಹನುಮ೦ತನನ್ನು ವಾಯುವಿನ ಸ್ವರ್ಗೀಯ ಮಗ ಎಂದೂ ಹೇಳಲಾಗುತ್ತದೆ. ಹನುಮಂತನ ತಾಯಿ ಅಂಜನಾದೇವಿ. ಅಪ್ಸರೆಯಾಗಿದ್ದ ಆಕೆ, ಶಾಪಕ್ಕೆ ಗುರಿಯಾಗಿ ವಾನರ ರೂಪವನ್ನು ಪಡೆದು ಮಗುವಿಗೆ ಜನ್ಮ ನೀಡಿದಳು. ಕ್ರಮೇಣ ಆಕೆಗೆ ಶಾಪ ವಿಮೋಚನೆ ಆಯ್ತು ವಾಲ್ಮೀಕಿ ರಾಮಾಯಣದ ಪ್ರಕಾರ, ಹನುಮ೦ತನ ತ೦ದೆ ಕೇಸರಿ ಕಿಷ್ಕಂಧಾ ರಾಜ್ಯದ ಸಮೀಪವಿರುವ ಸುಮೇರು ಪ್ರದೇಶದ ರಾಜನಾಗಿದ್ದನು.