Gruhalakshmi yojana : ರಾಜ್ಯದಲ್ಲಿ ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯ (Gruhalakshmi yojana) 15 ಕಂತಿನ ಒಟ್ಟು 30,000 ರೂಪಾಯಿಗಳು ಮಹಿಳೆಯರ ಖಾತೆಗೆ ಜಮಾ ಆಗಿದ್ದು 16ನೇ ಕಂತಿನ ಹಣ ಈ ತಿಂಗಳ 31ರೊಳಗೆ (ಜ.31) ಯಜಮಾನಿಯರ ಖಾತೆಗೆ ಜಮಾ ಆಗಲಿದೆ ಎಂದು ಹೇಳಲಾಗುತ್ತಿದೆ.
ಈ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗುತ್ತಿರುವುದು ಸಂತೋಷದ ವಿಚಾರ. ಆದ್ದರಿಂದ ಮಹಿಳೆಯರನ್ನು ಸಶಕ್ತಗೊಳಿಸುವ ಈ ಯೋಜನೆಯನ್ನು ಬಂದ್ ಮಾಡದೇ ಮುಂದುವರಿಸಲಿದ್ದೇವೆ ಎಂದು ಸಿಎಂ ಈಗಾಗಲೇ ಕಳೆದವಾರ ಬೆಳಗಾವಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ.
ಇದನ್ನೂ ಓದಿ: Ration card | ಪಡಿತರದಾರರಿಗೆ ಗುಡ್ ನ್ಯೂಸ್; ತಿದ್ದುಪಡಿ ಮಾಡುವುದು ಈಗ ಬಲು ಸುಲಭ!
Gruhalakshmi yojana : ನಿಮಗೆ ಈ ಮೆಸೇಜ್ ಬಂತಾ?
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಯಿಂದ ಬಿಡುಗಡೆ ಆಗಿರುವ ಕಾರಣ ಗೃಹ ಲಕ್ಷ್ಮಿ ಯೋಜನೆ ಹಣ ಒಂದೆರಡು ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಅಧಿಕಾರಿಗಳಿಗೆ ಸಚಿವೆ ಹೆಬ್ಬಾಳ್ಕರ್ ಈ ಸಂಬಂಧ ಸೂಚನೆ ನೀಡಿದ್ದಾರೆ.
ಹೌದು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಗೃಹಿಣಿಯರು ಬೇಸತ್ತು ಹೋಗಿದ್ದು, ಗೃಹ ಲಕ್ಷ್ಮಿ ಹಣವನ್ನು ಎದುರು ನೋಡುತ್ತಿದ್ದಾರೆ. ನಿಮ್ಮ ಅಕೌಂಟ್‌ಗಳಿಗೆ ಹಣ ಪಾವತಿಯಾಗಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿ. ʻಗೃಹಲಕ್ಷ್ಮಿʼ ಸರ್ಕಾರದ ಮಹಾತ್ವಾಂಕ್ಷಿ ಯೋಜನೆಯಾಗಿದೆ.
ಇದನ್ನೂ ಓದಿ: PM Kisan Yojana | ರೈತರಿಗೆ ಸಿಹಿಸುದ್ದಿ, ಇದೇ ದಿನ ರೈತರ ಖಾತೆಗಳಿಗೆ ₹2,000!