ATM ಬಳಕೆದಾರರಿಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ‘ಬ್ಯಾಂಕ್‌ಗಳಿಂದ ಹಣ ಹಿಂಪಡೆಯಲು ಯಾವುದೇ ಜಿಎಸ್‌ಟಿ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.
ಹೌದು, ರಾಜ್ಯಸಭೆಯಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಎಟಿಎಂಗಳಿಂದ ಹಣ ತೆಗೆಯಲು ಒಂದು ತಿಂಗಳಲ್ಲಿ 10 ವಹಿವಾಟುಗಳು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಖಾತೆ ಹೊಂದಿರುವ ಬ್ಯಾಂಕ್ ATMನಲ್ಲಿ 5 ಬಾರಿ ಹಾಗೂ ಇತರೆ ಬ್ಯಾಂಕ್‌ಗಳ ATMನಲ್ಲಿ 5 ಬಾರಿ ಹಣ ವಿತ್ ಡ್ರಾ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಇನ್ನು, ಸ್ಮಶಾನ, ಶವಸಂಸ್ಕಾರ ಸೇವೆಗಳ ಮೇಲೆ ಜಿಎಸ್‌ಟಿ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.