ಬೆಂಗಳೂರು: ಗ್ರಾಮ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್ ಆದಂತಾಗಿದೆ. ಹೌದು, ಇಂದು ರಾಜ್ಯ ಹೈಕೋರ್ಟ್ ಗ್ರಾಮ ಪಂಚಾಯ್ತಿ ಎಲೆಕ್ಷನ್ ನಡೆಸಲು ಅನುಮತಿ ನೀಡಿದ್ದು, ಚುನಾವಣಾ ಆಯೋಗಕ್ಕೆ 3 ವಾರಗಳಲ್ಲಿ ವೇಳಾಪಟ್ಟಿ ಪ್ರಕಟಿಸುವಂತೆ ನಿರ್ದೇಶನ ನೀಡಿದೆ.
ಎಲೆಕ್ಷನ್ ಘೋಷಣೆ ಬಗ್ಗೆ 3 ವಾರದಲ್ಲಿ ಆಯೋಗ ತೀರ್ಮಾನಿಸಬೇಕು. ಅಧಿಕಾರಿಗಳೊಂದಿಗೆ ಆಯೋಗ ಸಮಾಲೋಚನೆ ನಡೆಸಬಹುದು. ಇನ್ನು ಚುನಾವಣೆಗೆ ಹಣಕಾಸಿನ ಅಗತ್ಯವಿದ್ದರೆ ರಾಜ್ಯಪಾಲರನ್ನು ಸಂಪರ್ಕಿಸಬಹುದು ಎಂದು ರಾಜ್ಯ ಹೈಕೋರ್ಟ್ ಹೇಳಿದೆ.
ಈ ಹಿಂದೆ ಸದ್ಯ ಗ್ರಾಮ ಪಂಚಾಯತ್ ಚುನಾವಣೆ ನಡೆಸದಂತೆ ಜೆಡಿಎಸ್, ಬಿಜೆಪಿ ಪಕ್ಷಗಳು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವು. ಆದರೆ ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಕೋರ್ಟ್ ಗೆ ಅನುಮತಿ ಕೋರಿತ್ತು.