ಹೂವಿನ ಹಡಗಲಿ: ನಾಡಿನ ಶ್ರೇಷ್ಠ ಉತ್ಸವ ಎನಿಸಿಕೊಳ್ಳುವ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ಮಂಗಳವಾರ ವರ್ಷದ ಕಾರ್ಣಿಕೋತ್ಸವ ಜರುಗಿತು.
ಹೌದು, ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಣಿಕ ಕಂಬವನ್ನೇರಿದ ಗೊರವಯ್ಯ ರಾಮಪ್ಪ, ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೆ ಪರಾಕ್’ ಎಂದು ವರ್ಷದ ಭವಿಷ್ಯ ನುಡಿದಿದ್ದಾರೆ.
ಕಾರ್ಣಿಕೋತ್ಸವ ವಿಶ್ಲೇಷಣೆ :
ಗೊರವಯ್ಯ ರಾಮಪ್ಪ ‘ಅಂಬಲಿ ಹಳಸಿತು, ಕಂಬಳಿ ಬೀಸಿತಲೆ ಪರಾಕ್’ ಎಂಬ ನುಡಿದ ವರ್ಷದ ಕಾರ್ಣಿಕವನ್ನು ದೇವಾಲಯದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್, ‘ಮಳೆ, ಬೆಳೆ ಸಮೃದ್ಧಿಯಾಗಲಿದೆ. ರಾಜ್ಯವನ್ನು ಪ್ರಾಮಾಣಿಕ ವ್ಯಕ್ತಿ ಆಳುತ್ತಾನೆ’ ಎಂದು ವಿಶ್ಲೇಷಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.




