Google Maps ಅವಾಂತರ: ಮ್ಯಾಪ್‌ನ ಶಾರ್ಟ್‌ಕಟ್ ಹಿಡಿದು ಕಾಡಿನಲ್ಲಿ ದಾರಿತಪ್ಪಿದ ಕುಟುಂಬ!

ಬೆಳಗಾವಿ: ಹೊಸದಾದ ಪ್ರದೇಶಕ್ಕೆ ತೆರಳುವಾಗ ಸಾಮಾನ್ಯವಾಗಿ ಎಲ್ಲರೂ ಗೂಗಲ್ ಮ್ಯಾಪ್ ಮೊರೆ ಹೋಗುತ್ತಾರೆ. ಅದರಲ್ಲೂ ಪ್ರವಾಸಕ್ಕೆ ಹೋಗುವವರು ಗೂಗಲ್ ಮ್ಯಾಪ್ ಮೂಲಕವೇ ತಲುಪಬೇಕಾದ ಜಾಗಕ್ಕೆ ಸಮೀಪದ ರಸ್ತೆಯನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಂದು ಕುಟುಂಬ…

ಬೆಳಗಾವಿ: ಹೊಸದಾದ ಪ್ರದೇಶಕ್ಕೆ ತೆರಳುವಾಗ ಸಾಮಾನ್ಯವಾಗಿ ಎಲ್ಲರೂ ಗೂಗಲ್ ಮ್ಯಾಪ್ ಮೊರೆ ಹೋಗುತ್ತಾರೆ. ಅದರಲ್ಲೂ ಪ್ರವಾಸಕ್ಕೆ ಹೋಗುವವರು ಗೂಗಲ್ ಮ್ಯಾಪ್ ಮೂಲಕವೇ ತಲುಪಬೇಕಾದ ಜಾಗಕ್ಕೆ ಸಮೀಪದ ರಸ್ತೆಯನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಂದು ಕುಟುಂಬ ಗೂಗಲ್ ಮ್ಯಾಪ್ ನಂಬಿಕೊಂಡು ಹೊರಟು ರಾತ್ರಿಯಿಡೀ ಕಾಡಿನಲ್ಲಿ ಕಾಲ ಕಳೆದ ಘಟನೆ ನಡೆದಿದೆ.

ಬೆಳಗಾವಿಯ ಖಾನಾಪುರ ಭೀಮಗಢ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ರಣಜಿತದಾಸ್ ಎಂಬುವವರೇ ಕಾಡಿನಲ್ಲೇ ಕಾಲಕಳೆದ ಕುಟುಂಬವಾಗಿದ್ದಾರೆ. 

ಆಂಧ್ರಪ್ರದೇಶದಿಂದ ರಣಜಿತದಾಸ್ ಕುಟುಂಬ ಗೋವಾಕ್ಕೆ ಪ್ರವಾಸಕ್ಕೆಂದು ಕಾರಿನಲ್ಲಿ ಹೊರಟಿದ್ದು, ಗೂಗಲ್ ಮ್ಯಾಪ್‌ನಲ್ಲಿ ಮಾರ್ಗ ಹುಡುಕಿದ್ದಾರೆ. ಈ ವೇಳೆ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗದ ಸಮೀಪ ಗೂಗಲ್ ಮ್ಯಾಪ್ ದಾರಿ ತೋರಿಸಿದೆ. ಮ್ಯಾಪ್ ನಂಬಿ ಭೀಮಗಢ ಅರಣ್ಯದೊಳಗೆ 7-8 ಕಿ.ಮೀ ತೆರಳಿದ್ದಾರೆ. ಈ ವೇಳೆ ದಾರಿ ತಪ್ಪಿ ಫಜೀತಿಗೆ ಒಳಗಾಗಿದ್ದಾರೆ. ಮಧ್ಯರಾತ್ರಿ ದಾರಿತಪ್ಪಿ ಕಾರು 10 ಕಿ.ಮೀ ಕಾಡಿನೊಳಗೆ ಹೋಗಿತ್ತು. ರಸ್ತೆ ಮುಗಿದು ಹಳ್ಳ ಬಂದಾಗ ನಾವು ದಾರಿ ತಪ್ಪಿದ್ದೇವೆ ಎಂದು ಅವರಿಗೆ ಅರಿವಾಗಿದೆ.

Vijayaprabha Mobile App free

ಅರಣ್ಯ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸಿಗದೇ ಪರದಾಡಿದ್ದಾರೆ. ಬಳಿಕ 4 ಕಿಲೋ ಮೀಟರ್ ಹೊರ ಬಂದ ಬಳಿಕ ನೆಟ್ವರ್ಕ್ ಸಿಕ್ಕಿದ್ದು, ಸಹಾಯಕ್ಕಾಗಿ 112 ಸಿಬ್ಬಂದಿಗೆ ಕರೆ ಮಾಡಿ ಕಾಡಿನಲ್ಲಿ ಸಿಲುಕಿದ್ದಾಗಿ ಹೇಳಿ ಪೊಲೀಸರ ನೆರವಿನೊಂದಿಗೆ ವಾಪಸ್ಸಾಗಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply