ತಿರುಪತಿ : ವಿಶ್ವದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕರೋನ ಸೋಂಕು ಹಿನ್ನಲೆ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿತ್ತು. ಈಗ ಲಾಕ್ ಡೌನ್ ಸಡಿಲಿಕೆಯಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 3 ಸಾವಿರ ಟೋಕನ್ ಉಚಿತವಾಗಿ ನೀಡಲು ತಿರುಪತಿ-ತಿರುಮಲ ದೇವಸ್ಥಾನ ಮಂಡಳಿ ತೀರ್ಮಾನಿಸಿದೆ ಎನ್ನಲಾಗಿದೆ.
ಲಾಕ್ ಡೌನ್ ಕಾರಣ ಸ್ಥಗಿತಗೊಂಡಿದ್ದ ಕೇಂದ್ರ ಸರ್ಕಾರದ ಲಾಕ್ ಡೌನ್ ಸಡಿಲಿಕೆಯ ನಂತರ, ತಿರುಪತಿ ತಿಮ್ಮಪ್ಪನ ಉಚಿತ ದರ್ಶನ ಟೋಕನ್ ವ್ಯವಸ್ಥೆಗೆ ಟಿಟಿಡಿ ಮತ್ತೆ ಚಾಲನೆ ನೀಡಿದ್ದು, ಪ್ರತಿನಿತ್ಯ 3000 ಉಚಿತ ಟೋಕನ್ ನೀಡಲು ತೀರ್ಮಾನಿಸಿದೆ. ದರ್ಶನಕ್ಕೆ ಬರುವ ಭಕ್ತರು ತಿರುಮಲದ ಭೂದೇವಿ ಕಾಂಪ್ಲೆಕ್ಸ್ ನಲ್ಲಿ ಟೋಕನ್ ಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದೆ.
ಇದರಿಂದ ಶುಲ್ಕ ರಹಿತವಾಗಿ ದೇವರ ದರ್ಶನ ಪಡೆಯಬಹುದಾಗಿದೆ ತಿರುಪತಿ-ತಿರುಮಲ ದೇವಸ್ಥಾನ ಮಂಡಳಿ ಎಂದು ಹೇಳಿದೆ.