ನೌಕರರಿಗೆ ಸಿಹಿಸುದ್ದಿಯನ್ನು ನೀಡಲು ಮೋದಿ ಸರ್ಕಾರ ಸಿದ್ಧವಾಗಿದ್ದು, ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಕೇಂದ್ರ ಹಣಕಾಸು ಸಚಿವಾಲಯ ಒಳ್ಳೆಯ ಸುದ್ದಿ ನೀಡಿದೆ. ಬಾಕಿ ಇರುವ ಎಲ್ಲಾ ಮೂರು ಡಿಎಗಳನ್ನು ಏಕಕಾಲದಲ್ಲಿ ನೀಡಲಾಗುವುದು ಎಂದು ಪ್ರಕಟಿಸಿದೆ.
ಉದ್ಯೋಗಿಗಳು ಮತ್ತು ಪಿಂಚಣಿದಾರರು ಜುಲೈ 1, 2021 ರಿಂದ ಬಾಕಿ ಇರುವ ಡಿಎ ಭತ್ಯೆ ಲಭಿಸುತ್ತದೆ ಎಂದು ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ರಾಜ್ಯಸಭೆಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಕೋವಿಡ್ 19 ರ ಕಾರಣದಿಂದಾಗಿ ಕೇಂದ್ರ ಸರ್ಕಾರವು ಉದ್ಯೋಗಿಗಳಿಗೆ ಡಿಎ ಹೆಚ್ಚಳ ಮತ್ತು ಪಿಂಚಣಿದಾರರಿಗೆ ಡಿಆರ್ ಹೆಚ್ಚಳವನ್ನು ತಡೆಹಿಡಿದಿದ್ದು ತಿಳಿದ ವಿಷಯ.
ಕೇಂದ್ರ ಸರ್ಕಾರ ತೆಗೆದುಕೊಂಡ ಈ ನಿರ್ಣಯ ಕರೋನಾ ಬಿಕ್ಕಟ್ಟಿನಲ್ಲಿ 37,000 ಕೋಟಿ ರೂ. ಉಳಿಸಲಾಗಿದೆ. ನೌಕರರು 1.12020, 1.7.2020, 1.1.2021 ರಿಂದ 3 ಡಿಎ ಕಂತುಗಳು ಪೆಂಡಿಂಗ್ ನಲ್ಲಿ ಇದೆ. ಸರ್ಕಾರದ ಇತ್ತೀಚಿನ ನಿರ್ಧಾರವು 50 ಲಕ್ಷ ಉದ್ಯೋಗಿಗಳು ಮತ್ತು 60 ಲಕ್ಷ ಪಿಂಚಣಿದಾರರ ಮೇಲೆ ಪರಿಣಾಮ ಬೀರುತ್ತದೆ.
ಕೇಂದ್ರ ಸರ್ಕಾರಿ ನೌಕರರು ಪ್ರಸ್ತುತ ಶೇ 17 ರಷ್ಟು ಡಿ.ಎ. ಸಿಗುತ್ತದೆ. ಡಿಎ ಹೆಚ್ಚಳ ಜಾರಿಗೆ ಬಂದರೆ ನೌಕರರ ವೇತನ ಹೆಚ್ಚಾಗುತ್ತದೆ. ಇದು ಅನೇಕ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಮತ್ತೊಂದೆಡೆ ಪಿಂಚಣಿದಾರರಿಗೂ ಸಹ ಪ್ರಯೋಜನ ಸಿಗುತ್ತದೆ. ಹಲವು ದಿನಗಳಿಂದ ಡಿಎ ಹೆಚ್ಚಳ ನಿರೀಕ್ಷಿಸುತ್ತಿರುವವರಿಗೆ ಇದು ಒಳ್ಳೆಯ ಸುದ್ದಿ ಎನ್ನಬಹುದು.