ವಾಟ್ಸಾಪ್ ಬಳಕೆದಾರರಿಗಂತೂ ಪ್ರತಿ ತಿಂಗಳು ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುವ ವಾಟ್ಸಾಪ್ ಗ್ರೂಪ್, ಇದೀಗ ತ್ವರಿತ ಮೆಸೇಜಿಂಗ್ ಪ್ಲಾಟ್ಫಾರ್ಮ್ ಅಂತಿಮವಾಗಿ ಅನೇಕ ವರ್ಷಗಳಿಂದ ಕಾಯುತ್ತಿರುವ ವೈಶಿಷ್ಟ್ಯವನ್ನು ಅನಾವರಣಗೊಳಸಲಿದೆ ಎಂದು ಹೇಳಿದೆ.
ನಿಮ್ಮ ಆನ್ ಲೈನ್ ಸ್ಟೇಟಸ್ ಅನ್ನು ಮರೆಮಾಚಲು ಶೀಘ್ರದಲ್ಲೇ ನಿಮಗೆ ಅವಕಾಶ ನೀಡುವುದಾಗಿ ವಾಟ್ಸಾಪ್ ಘೋಷಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಆನ್ ಲೈನ್ ಸ್ಟೇಟಸ್ ಮರೆ ಮಾಡಲು ಅವಕಾಶ ಇದೆ ಎಂದು ಹೇಳಿದೆ.
ಮತ್ತೆ 3 ಹೊಸ ಫೀಚರ್ ಪರಿಚಯಿಸಿದ ವಾಟ್ಸ್ಆ್ಯಪ್:
ಇನ್ನು, ವಾಟ್ಸ್ಆ್ಯಪ್ ಸಂಸ್ಥೆಯು ತನ್ನ ಬಳಕೆದಾರರಿಗಾಗಿ ಮತ್ತಷ್ಟು ಹೊಸ ಫೀಚರ್ಗಳನ್ನು ಪರಿಚಯಿಸಿದ್ದು, ಬಳಕೆಯನ್ನು ಇನ್ನೂ ಸುಲಭ ಮಾಡಿಕೊಟ್ಟಿದೆ.
ಹೌದು, ನಿಮ್ಮ ಅಕೌಂಟ್ಗೆ ಬಂದಿರುವ ವಾಯ್ಸ್ ಮೆಸೇಜ್ ದೀರ್ಘ ಸಮಯದ್ದಾಗಿದ್ದರೆ, ಅದನ್ನು ಸ್ಪೀಡ್ಅಪ್ ಮಾಡಿ ತ್ವರಿತವಾಗಿ ಆಲಿಸಬಹುದಾಗಿದೆ. ಇತರರೊಂದಿಗೆ ಚಾಟಿಂಗ್ ಮಾಡುವಾಗಲೂ ವಾಯ್ಸ್ ಮೆಸೇಜಿನ ಧ್ವನಿಯನ್ನು ನಿಶ್ಚಿಂತೆಯಿಂದ ಕೇಳಬಹುದು. ವಾಯ್ಸ್ ರೆಕಾರ್ಡ್ ಮಾಡುವಾಗ ಪಾಸ್ ಮಾಡಿ, ಮತ್ತೆ ಮುಂದುವರಿಸುವ ಸೌಲಭ್ಯವನ್ನೂ ಒದಗಿಸಲಾಗಿದೆ.