Vodafone Idea ಬಳಕೆದಾರರಿಗೆ ಗುಡ್ ನ್ಯೂಸ್: ಈ ಪ್ಲ್ಯಾನ್ ನಿಂದ ದಿನಕ್ಕೆ 4GB ಹೆಚ್ಚುವರಿ ಡೇಟಾ!

ಪ್ರಮುಖ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vodafone Idea – Vi) ಮತ್ತೊಮ್ಮೆ ದಿನಕ್ಕೆ 4GB ಡೇಟಾವನ್ನು ಒದಗಿಸಲು ಯೋಜನೆಯನ್ನು ನವೀಕರಿಸಿದ್ದು, ಮತ್ತೊಂದು ಪ್ಲ್ಯಾನ್ ನಲ್ಲಿ ಹೆಚ್ಚುವರಿ ಡೇಟಾವನ್ನು ಸಹ ನೀಡುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ…

vodafone-idea-vijayaprabha-news

ಪ್ರಮುಖ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ (Vodafone Idea – Vi) ಮತ್ತೊಮ್ಮೆ ದಿನಕ್ಕೆ 4GB ಡೇಟಾವನ್ನು ಒದಗಿಸಲು ಯೋಜನೆಯನ್ನು ನವೀಕರಿಸಿದ್ದು, ಮತ್ತೊಂದು ಪ್ಲ್ಯಾನ್ ನಲ್ಲಿ ಹೆಚ್ಚುವರಿ ಡೇಟಾವನ್ನು ಸಹ ನೀಡುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಿಪೇಯ್ಡ್ ದರಗಳನ್ನು ಹೆಚ್ಚಿಸಿದಾಗ ಸ್ಥಗಿತಗೊಂಡಿದ್ದ ಪ್ರಯೋಜನಗಳನ್ನುಇದೀಗ ಮರಳಿ ತಂದಿದ್ದು, ಈ ಯೋಜನೆಯೊಂದಿಗೆ ನೀವು ಈಗ ದಿನಕ್ಕೆ 4GB ಡೇಟಾವನ್ನು ಪಡೆಯಬಹುದು. ಇತ್ತೀಚೆಗೆ ಹೊಸ ಪ್ಲ್ಯಾನ್ ಮತ್ತು ಕೊಡುಗೆಗಳನ್ನು ಪ್ರಕಟಿಸುತ್ತಿರುವ ವೊಡಾಫೋನ್ ಐಡಿಯಾ (Vi), ಈ ಎರಡು ಕೊಡುಗೆಗಳಲ್ಲಿ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಮೌನವಾಗಿ ಪರಿಚಯಿಸಿದೆ.

ವೊಡಾಫೋನ್ ಐಡಿಯಾ (Vi) ಹೊಸ ರೂ 409 ಮತ್ತು ರೂ 475 ಪ್ರಿಪೇಯ್ಡ್ ಯೋಜನೆಗಳನ್ನು ನವೀಕರಿಸಿದ್ದು, ಇವುಗಳ ಮೇಲೆ ಹೆಚ್ಚಿನ ಡೇಟಾ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಗಳ ಸಂಪೂರ್ಣ ಪ್ರಯೋಜನಗಳನ್ನು ಪರಿಶೀಲಿಸಿ.

ವೊಡಾಫೋನ್ ಐಡಿಯಾ ರೂ.409 ಯೋಜನೆ:

Vijayaprabha Mobile App free

ದಿನದಲ್ಲಿ ಹೆಚ್ಚಿನ ಡೇಟಾ ಅಗತ್ಯವಿರುವವರಿಗೆ ಈ ಯೋಜನೆ ಸೂಕ್ತವಾಗಿದ್ದು, Vi ರೂ 409 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿ ಇಲ್ಲಿಯವರೆಗೆ 2.5GB ಡೇಟಾವನ್ನು ಪಡೆಯುತ್ತಿದ್ದರು. ಆದರೆ ಈಗ ವೊಡಾಫೋನ್ ಐಡಿಯಾ ಇದನ್ನು 3.5 ಜಿಬಿಗೆ ಹೆಚ್ಚಿಸಿದೆ. ಅಂದರೆ ನೀವು ದಿನಕ್ಕೆ 1GB ಹೆಚ್ಚುವರಿ ಡೇಟಾವನ್ನು ಪಡೆಯಬಹುದು. ಈ ಯೋಜನೆಯ ಮಾನ್ಯತೆ 28 ದಿನಗಳಾಗಿದ್ದು, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಜೊತೆಗೆ ದಿನಕ್ಕೆ 3.5GB ಡೇಟಾವನ್ನು ಪಡೆವಬಹುದು.

ವೊಡಾಫೋನ್ ಐಡಿಯಾ ರೂ.475 ಯೋಜನೆ:

ರೂ 475 ಪ್ಲಾನ್ ಹೆಚ್ಚು ಡೇಟಾ ಬಯಸುವವರಿಗೆ ಇದು ಕೂಡ ತುಂಬಾ ಉಪಯುಕ್ತವಾಗಿದ್ದು, ಹೊಸ ಡೇಟಾ ಪ್ರಯೋಜನವು ಹೆಚ್ಚು ಕೈಗೆಟುಕುವಂತಿದೆ. ಹೌದು, Vi 475 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿ ಇಲ್ಲಿಯವರೆಗೆ ದಿನಕ್ಕೆ 3GB ಡೇಟಾವನ್ನು ಪಡೆಯುತ್ತಿದ್ದರು. ಇತ್ತೀಚಿನ ಅಪ್‌ಗ್ರೇಡ್‌ನೊಂದಿಗೆ ನೀವು ಇಂದಿನಿಂದ ಪ್ರತಿದಿನ 4GB ಪಡೆಯುತ್ತೀರಿ. ನೀವು ಅನಿಯಮಿತ ಕರೆಗಳನ್ನು ಮತ್ತು ದಿನಕ್ಕೆ 100 SMS ಅನ್ನು ಸಹ ಪಡೆಯಬಹುದು. ಈ ಯೋಜನೆಯ ವ್ಯಾಲಿಡಿಟಿ ಕೂಡ 28 ದಿನಗಳು. ಇದರೊಂದಿಗೆ, ವೊಡಾಫೋನ್ ಐಡಿಯಾ ದಿನಕ್ಕೆ 4GB ಡೇಟಾವನ್ನು ಒದಗಿಸುವ ಏಕೈಕ ಟೆಲಿಕಾಂ ಆಪರೇಟರ್ ಆಗಿದೆ.

ಈ ಯೋಜನೆಗಳನ್ನು ತೆಗೆದುಕೊಳ್ಳುವುದರಿಂದ Vodafone Hero ಪ್ರಯೋಜನಗಳನ್ನು ಸಹ ಪಡೆಯಬಹುದು. ಮಧ್ಯರಾತ್ರಿ 12 ರಿಂದ ಬೆಳಗ್ಗೆ 6 ಗಂಟೆಯವರೆಗೆ ಅನಿಯಮಿತ ಡೇಟಾವನ್ನು ಬಳಸಲು ಬಿಂಜ್ ಆಲ್ ನೈಟ್, ತಿಂಗಳಿಗೆ ಹೆಚ್ಚುವರಿ 2GB ವೋಚರ್‌ಗಳೊಂದಿಗೆ ಡೇಟಾ ಡಿಲೈಟ್‌ಗಳು, ವಾರದ ದಿನಗಳಲ್ಲಿ ಶನಿವಾರ ಮತ್ತು ಭಾನುವಾರದಂದು ಉಳಿದ ಡೇಟಾವನ್ನು ಪಡೆಯಲು ವಾರಾಂತ್ಯದ ಡೇಟಾ ರೋಲ್‌ಓವರ್ ಪ್ರಯೋಜನಗಳು ಸಿಗುತ್ತವೆ. ಇನ್ನು, Vi Movies, Vi TV ಸೇವೆಯನ್ನು ಸಹ ಉಚಿತವಾಗಿ ಬಳಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.