ಬೆಂಗಳೂರು: ಕೊರೋನಾ ಹಿನ್ನೆಲೆ ಎನ್‍ಎಫ್‍ಎಸ್‍ಎ & ಪಿಎಂಜಿಕೆಎವೈ ಯೋಜನೆಯಡಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಬಿಡುಗಡೆ ಮಾಡಲಾಗಿದೆ.
ಅಂತ್ಯೋದಯ ಎಎವೈ ಪಡಿತರ ಚೀಟಿ ಹೊಂದಿರುವ ಪಡಿತರದಾರರಿಗೆ ಎನ್‍ಎಫ್‍ಎಸ್‍ಎ ಯೋಜನೆಯಡಿ 35 ಕೆಜಿ ಅಕ್ಕಿ & ಪಿಎಂಜಿಕೆಎವೈ ಯೋಜನೆಯಡಿ ಪ್ರತಿ ಯುನಿಟ್ ಗೆ 5 ಕೆಜಿ ಅಕ್ಕಿ, BPL ಕಾರ್ಡ್ ಹೊಂದಿರುವ ಪಡಿತರಾದಾರರಿಗೆ ಎನ್‍ಎಫ್‍ಎಸ್‍ಎ ಯೋಜನೆಯಡಿ 5 ಕೆಜಿ ಅಕ್ಕಿ, 2 ಕೆಜಿ ಗೋಧಿ ಮತ್ತು ಪಿಎಂಜಿಕೆಎವೈ ಯೋಜನೆಯಡಿ ಪ್ರತಿ ಯುನಿಟ್ ಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ.
ಇನ್ನು APL ಕಾರ್ಡ್ ಹೊಂದಿರುವ ಪಡಿತರದಾರರಿಗೆ ಏಕ ಸದಸ್ಯತ್ವಕ್ಕೆ ಪ್ರತಿ ಕೆಜಿ 15 ರೂ.ಗಳಂತೆ 5 ಕೆಜಿ ಅಕ್ಕಿ, 2 ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರದಾರರಿಗೆ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಇನ್ನು BPL ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೂ ಅಕ್ಕಿ ಉಚಿತವಾಗಿ ನೀಡಲಾಗುತ್ತದೆ. APLಗೆ ಅರ್ಜಿ ಸಲ್ಲಿಸಿದವರಿಗೂ ರಿಯಾಯಿತಿ ದರದಲ್ಲಿ ಪಡಿತರ ಸಿಗಲಿದೆ.