ರೈಲ್ವೆ ಪ್ರಯಾಣಿಕರಿಗೆ ಒಳ್ಳೆಯ ಸುದ್ದಿ!: ಟಿಕೆಟ್‌ ಬುಕಿಂಗ್ ನಲ್ಲಿ ರಿಯಾಯಿತಿ ಕೊಡುಗೆ; ಈ ರೀತಿ ಪಡೆಯಿರಿ

ನೀವು ರೈಲಿನಲ್ಲಿ ಹೆಚ್ಚು ಪ್ರಯಾಣಿಸುತ್ತೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ನಿಮಗೋಸ್ಕರ ಒಂದು ರಿಯಾಯಿತಿ ಕೊಡುಗೆ ಲಭ್ಯವಿದ್ದು, ಟಿಕೆಟ್ ಬುಕಿಂಗ್‌ನಲ್ಲಿ ನೀವು ಹೆಚ್ಚುವರಿ ರಿಯಾಯಿತಿಯನ್ನು ಹೊಂದಬಹುದು. ಯುಪಿಐ ಮೂಲಕ ಟಿಕೆಟ್ ಶುಲ್ಕವನ್ನು ಪಾವತಿಸಿದರೆ ನಿಮಗೆ…

indian-railways-irctc-vijayaprabha-news

ನೀವು ರೈಲಿನಲ್ಲಿ ಹೆಚ್ಚು ಪ್ರಯಾಣಿಸುತ್ತೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ನಿಮಗೋಸ್ಕರ ಒಂದು ರಿಯಾಯಿತಿ ಕೊಡುಗೆ ಲಭ್ಯವಿದ್ದು, ಟಿಕೆಟ್ ಬುಕಿಂಗ್‌ನಲ್ಲಿ ನೀವು ಹೆಚ್ಚುವರಿ ರಿಯಾಯಿತಿಯನ್ನು ಹೊಂದಬಹುದು. ಯುಪಿಐ ಮೂಲಕ ಟಿಕೆಟ್ ಶುಲ್ಕವನ್ನು ಪಾವತಿಸಿದರೆ ನಿಮಗೆ ರಿಯಾಯಿತಿ ಸಿಗುತ್ತದೆ.

ರೈಲು ಟಿಕೆಟ್‌ಗಳ ರಿಯಾಯಿತಿ ಕೊಡುಗೆ ಮುಂದಿನ ವರ್ಷ ಜೂನ್ 11 ರವರೆಗೆ ಲಭ್ಯವಿರುತ್ತದೆ. ಈ ರಿಯಾಯಿತಿ ಕೌಂಟರ್ ಮೂಲಕ ಟಿಕೆಟ್ ಖರೀದಿಸುವವರಿಗೆ ಮಾತ್ರವೇ ಲಭ್ಯವಿದೆ ಎಂದು ಗಮನಿಸಬೇಕು. ನೀವು ಮನೆಯಿಂದ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದರೆ ಈ ಕೊಡುಗೆ ಅನ್ವಯಿಸುವುದಿಲ್ಲ.

ರೈಲು ಟಿಕೆಟ್ ಬುಕ್ ಮಾಡುವವರಿಗೆ ಗರಿಷ್ಟ 50 ರೂ.ವರೆಗೆ ರಿಯಾಯಿತಿ ಸಿಗುತ್ತದೆ. ಆದರೆ, ರೈಲ್ವೆ ಟಿಕೆಟ್ ದರ ಕನಿಷ್ಠ 100 ರೂ. ಇರಬೇಕು. ಯುಪಿಐ ಅಥವಾ ಭೀಮ್ ಆ್ಯಪ್ ಮೂಲಕ ನೀವು ಟಿಕೆಟ್ ಶುಲ್ಕವನ್ನು ಪಾವತಿಸಿ ಆಫರ್ ಅನ್ನು ಪಡೆಯಬಹುದಾಗಿದ್ದು, ರೈಲ್ವೆ ಮೂಲಕ ಪ್ರಯಾಣಿಸುವವರಿಗೆ ಇದು ಉತ್ತಮವಾದ ಕೊಡುಗೆಯಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.