ಪಿಎಫ್ ಗ್ರಾಹಕರಿಗೆ ಒಳ್ಳೆಯ ಸುದ್ದಿ: ಈಗೆ ಮಾಡಿ ಒಂದು ಗಂಟೆಯಲ್ಲಿ ಲಕ್ಷ ರೂಪಾಯಿ ಪಡೆಯಿರಿ!

ನೀವು ಪಿಎಫ್ ಖಾತೆಯನ್ನು ಹೊಂದಿದ್ದೀರಾ? ಆಗಿದ್ದರೆ, ನಿಮಗೆ ಒಳ್ಳೆಯ ಸುದ್ದಿ. ಕೇಂದ್ರ ಸರ್ಕಾರ ಹೊಸ ಸೇವೆಗಳನ್ನು ಲಭ್ಯಗೊಳಿಸಿದ್ದು, ಇದರಿಂದ ಕೋವಿಡ್ 19 ಅಥವಾ ಇತರ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಪಿಎಫ್ ಚಂದಾದಾರರಿಗೆ ಅನುಕೂಲವಾಗಲಿದೆ. ನೌಕರರ…

money vijayaprabha news

ನೀವು ಪಿಎಫ್ ಖಾತೆಯನ್ನು ಹೊಂದಿದ್ದೀರಾ? ಆಗಿದ್ದರೆ, ನಿಮಗೆ ಒಳ್ಳೆಯ ಸುದ್ದಿ. ಕೇಂದ್ರ ಸರ್ಕಾರ ಹೊಸ ಸೇವೆಗಳನ್ನು ಲಭ್ಯಗೊಳಿಸಿದ್ದು, ಇದರಿಂದ ಕೋವಿಡ್ 19 ಅಥವಾ ಇತರ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಪಿಎಫ್ ಚಂದಾದಾರರಿಗೆ ಅನುಕೂಲವಾಗಲಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಚಂದಾದಾರರು ವೈದ್ಯಕೀಯ ತುರ್ತು ಸಮಯದಲ್ಲಿ ತಕ್ಷಣ ತಮ್ಮ ಪಿಎಫ್ ಖಾತೆಯಿಂದ 1 ಲಕ್ಷ ರೂ. ವರೆಗೂ ವಿತ್ ಡ್ರಾ ಮಾಡಿಕೊಳ್ಳಬಹುದು. ಇದಕ್ಕಾಗಿ ಪಿಎಫ್ ಖಾತೆದಾರರು ಯಾವುದೇ ವೆಚ್ಚದ ಅಂದಾಜುಗಳನ್ನು ಒದಗಿಸುವ ಅಗತ್ಯವಿಲ್ಲ.

ಇಪಿಎಫ್‌ಒ ಜೂನ್ 1 ರಂದು ಸುತ್ತೋಲೆ ಹೊರಡಿಸಿದ್ದು, ಇದರಲ್ಲಿ ವೈದ್ಯಕೀಯ ಮುಂಗಡ ಅಡಿಯಲ್ಲಿ ಒಂದು ಲಕ್ಷ ರೂ.ವರೆಗೂ ಪಡೆಯಬಹುದು ಎಂದು ತಿಳಿಸಿದೆ. ಕರೋನಾ ವೈರಸ್ ಸೇರಿದಂತೆ ಇತರ ಮಾರಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಈ ಹಣವನ್ನು ಬಳಸಬಹುದು. ವೈದ್ಯಕೀಯ ಮುಂಗಡ ಪಾವತಿಗಳು ಒಂದು ಗಂಟೆ ಅಥವಾ ಅದೇ ದಿನದೊಳಗೆ ಪಿಎಫ್ ಖಾತೆದಾರರಿಗೆ ತಲುಪುತ್ತದೆ. ಇದರಿಂದ ಅನೇಕ ಮಂದಿ ಪಿಎಫ್ ಖಾತೆದಾರರಿಗೆ ಅನುಕೂಲವಾಗಲಿದೆ.

ಈ ಹಿಂದೆ, ಇಪಿಎಫ್‌ಒ ತನ್ನ ಚಂದಾದಾರರಿಗೆ ಮೆಡಿಕಲ್ ಅಡ್ವಾನ್ಸ್ ಸಹ ಒದಗಿಸಿದೆ. ಆದರೆ ಇದಕ್ಕೆ ವೆಚ್ಚದ ಅಂದಾಜುಗಳನ್ನು ಒದಗಿಸಬೇಕಾಗಿತ್ತು. ಅಥವಾ ವೈದ್ಯಕೀಯ ಬಿಲ್‌ಗಳನ್ನು ಸಲ್ಲಿಸಿದ ನಂತರ ಹಣವನ್ನು ಒದಗಿಸುತ್ತಿತ್ತು. ಆದರೆ ಈಗ ಹಾಗಲ್ಲ.

Vijayaprabha Mobile App free

ನೀವು ಮಾಡಬೇಕಾಗಿರುವುದು ಪಿಎಫ್ ಹಿಂತೆಗೆದುಕೊಳ್ಳುವಿಕೆಗಾಗಿ ಪಿಎಫ್ ಗ್ರಾಹಕರು ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು. ವೈದ್ಯಕೀಯ ತುರ್ತು ಆಯ್ಕೆಯ ಅಡಿಯಲ್ಲಿ ವಿತ್ ಡ್ರಾಗೆ ಅರ್ಜಿ ಸಲ್ಲಿಸಬೇಕು. ಆದರೆ, ಇದಕ್ಕಾಗಿ ಕೆಲವು ಷರತ್ತುಗಳಿವೆ. ರೋಗಿಯನ್ನು ಬಿಡುಗಡೆ ಮಾಡಿದ 45 ದಿನಗಳೊಳಗೆ ಬಿಲ್ಲುಗಳನ್ನು ಸಲ್ಲಿಸಬೇಕು. ಆಸ್ಪತ್ರೆ ಮತ್ತು ರೋಗಿಯ ವಿವರಗಳನ್ನು ತಿಳಿಸಿ ರಿಕ್ವೆಸ್ಟ್ ಲೆಟರ್ ಸಲ್ಲಿಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.