ಬೆಂಗಳೂರು: ಮದುವೆ ಮಾಡಿಕೊಳ್ಳುವವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ರಾಜ್ಯದಲ್ಲಿ ನಾಳೆಯಿಂದ (ಜೂ.28) ಕಲ್ಯಾಣ ಮಂಟಪ, ಹೋಟೆಲ್, ರೆಸಾರ್ಟ್ ಮತ್ತು ಕನ್ವೆನ್ಷನ್ ಹಾಲ್‌ಗಳಲ್ಲಿ ಮದುವೆ ಆಯೋಜಿಸಲು ಸರ್ಕಾರ ಅನುಮತಿ ನೀಡಿದ್ದು, ಅಥಿತಿಗಳ ಸಂಖ್ಯೆಯನ್ನು 40 ಸೀಮಿತಗೊಳಿಸಲಾಗಿದೆ.
ಹೌದು, ಮದುವೆ ಆಯೋಜಿಸಲು ಸರ್ಕಾರ ಅನುಮತಿ ನೀಡಿದ್ದು, ಅತಿಥಿಗಳ ಸಂಖ್ಯೆಯನ್ನು 40 ಜನರಿಗೆ ಸೀಮಿತಗೊಳಿಸಲಾಗಿದ್ದು, ಮದುವೆಗೆ ಆಗಮಿಸುವ ಎಲ್ಲರಿಗೂ ಪಾಸ್ ಅಗತ್ಯವಿರುತ್ತದೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇನ್ನು, ಅನ್ಲಾಕ್ 2.0ನಲ್ಲಿ ಎಲ್ಲ ಅಂಗಡಿಗಳು ಹೋಟೆಲ್‌ಗಳನ್ನು ಪುನರಾರಂಭಿಸಲು ಅನುಮತಿ ನೀಡಿದ ಬಳಿಕ, ಕನ್ವೆನ್ಷನ್ ಹಾಲ್‌ಗಳು ಕಾರ್ಯ ನಿರ್ವಹಿಸಲು ಸರ್ಕಾರ ಅನುಮತಿಸಿದೆ.
ಮದುವೆಗೆ 50 ಮಂದಿ ಭಾಗವಹಿಸಲು ಅನುಮತಿ:
ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡ ಜಿಮ್ & ಯೋಗ ಕೇಂದ್ರಗಳನ್ನು ಸೋಮವಾರದಿಂದ 50% ಸಾಮರ್ಥ್ಯದೊಂದಿಗೆ ತೆರೆಯಲು ಅವಕಾಶ ನೀಡಿ ಆದೇಶ ಹೊರಡಿಸಲಾಗಿದ್ದು, ಕಲ್ಯಾಣ ಮಂಟಪ ಮತ್ತು ಹೋಟೆಲ್‌ಗಳಲ್ಲಿ ವಿವಾಹ ಆಯೋಜಿಸಲು ಅನುಮತಿ ನೀಡಲಾಗಿದ್ದು, ಭಾಗವಹಿಸುವವರ ಸಂಖ್ಯೆಯನ್ನು 50ಕ್ಕೆ ಸೀಮಿತಗೊಳಿಸಲಾಗಿದೆ.
ಇನ್ನು, ಶಾಲೆಗಳು, ಕಾಲೇಜುಗಳು, ಚಿತ್ರಮಂದಿರಗಳು, ಮನೋರಂಜನಾ ಪಾರ್ಕ್ ಮತ್ತು ಸ್ಪಾಗಳನ್ನು ತೆರೆಯಲು ಅನುಮತಿ ನೀಡಿಲ್ಲ.