ಎಲ್‌ಐಸಿ (LIC) ತನ್ನ ಗ್ರಾಹಕರಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದು, ಎಲ್‌ಐಸಿ ಹೌಸಿಂಗ್ ಫೈನಾನ್ಸ್ (Housing Finance) ಸ್ಥಿರ ಠೇವಣಿಗಳ (Fixed Deposit) ಮೇಲಿನ ಬಡ್ಡಿದರವನ್ನು (Interest Rate) ಶೇ 7.25 ರಿಂದ 7.75ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದು, ಬಡ್ಡಿ ಹಣವನ್ನು ಪ್ರತಿ ವರ್ಷ FD ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ ಎಂದು ಪ್ರಕಟಿಸಿದೆ.
ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿದವರಿಗೆ ಬಿಗ್ ನ್ಯೂಸ್; ಇನ್ಮುಂದೆ ನಿಮ್ಮ ಆಸ್ತಿಗೂ ಆಧಾರ್ ಲಿಂಕ್ ಮಾಡಬೇಕು!
ಹೌದು, ಹೌಸಿಂಗ್ ಫೈನಾನ್ಸ್ (Housing Finance) ಈಗ 7.25% ರಿಂದ 7.75% ವರೆಗಿನ ಬಡ್ಡಿದರಗಳನ್ನು (Interest Rate) ನೀಡುತ್ತಿದ್ದು, ವರ್ಷಕ್ಕೆ ಶೇ 7.25, 18 ತಿಂಗಳಿಗೆ ಶೇ 7.35, 2 ವರ್ಷಗಳ FD ಗಳಲ್ಲಿ ಶೇ 7.6 ಮತ್ತು ಐದು ವರ್ಷಗಳ FD ಗಳಲ್ಲಿ ಶೇ 7.75ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಇದು ಒಂದರಿಂದ ಐದು ವರ್ಷಗಳ ಅವಧಿಗೆ ಅನ್ವಯಿಸುತ್ತದೆ.
ಇದನ್ನು ಓದಿ: ವಿದ್ಯುತ್ ಇಲಾಖೆಯಲ್ಲಿ ವಿವಿಧ ಹುದ್ದೆಗಳು; ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆ ದಿನ
ಸಂಚಿತ ಸಾರ್ವಜನಿಕ ಠೇವಣಿ ಯೋಜನೆಯಡಿ (Cumulative Public Deposit Scheme), ನೀವು ರೂ.20 ಸಾವಿರದಿಂದ ರೂ.20 ಕೋಟಿವರೆಗೆ ಹಣವನ್ನು ಉಳಿಸಬಹುದು. ಇನ್ನು, ಬಡ್ಡಿ ಹಣವನ್ನು ಪ್ರತಿ ವರ್ಷ FD ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಆದರೆ ಮೆಚ್ಯೂರಿಟಿ (Maturity) ನಂತರ ಅವರಿಗೆ ಹಣ ನೀಡಲಾಗುತ್ತದೆ.
ಇದನ್ನು ಓದಿ: LPG ಗ್ರಾಹಕರಿಗೆ ಗುಡ್ ನ್ಯೂಸ್; ಗ್ಯಾಸ್ ಸಿಲಿಂಡರ್ ಮೇಲೆ ಬರೋಬ್ಬರಿ 2,400 ರೂ ಸಬ್ಸಿಡಿ, ಹೀಗೆ ಪಡೆಯಬಹುದು!