Annabhagya : ಅರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ಅನ್ನಭಾಗ್ಯ ಯೋಜನೆಯ ಅಕ್ಕಿ ಕಡಿಮೆ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ.
ಹೌದು, ಹಾವೇರಿ ಜಿಲ್ಲೆಯ ಸವಣೂರಲ್ಲಿ ಕಾಂಗ್ರೆಸ್ ಕೃತಜ್ಞತಾ ಸಮಾವೇಶ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅರ್ಹ BPL ಕಾರ್ಡ್’ದಾರರಿಗೆ ಅಕ್ಕಿ ಕಡಿಮೆ ಮಾಡುವುದಿಲ್ಲ, ಕಾರ್ಡ್ ಕಿತ್ತುಕೊಳ್ಳುವುದಿಲ್ಲ.ಅರ್ಹ ಇರುವ ಎಲ್ಲರಿಗೂ ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Heavy rain | ಫೆಂಗಲ್ ಆಯ್ತು ಇನ್ನೀಗ ಮತ್ತೆರಡು ಸೈಕ್ಲೋನ್ ಕಾಟ; ಡಿ.14ರವರೆಗೂ ರಾಜ್ಯದಲ್ಲಿ ಭಾರೀ ಮಳೆ!
ಇನ್ನು, ದೇಶದಲ್ಲಿ ನಮ್ಮ ರಾಜ್ಯದಲ್ಲಷ್ಟೇ 10Kg ಅಕ್ಕಿ ಕೊಡುತ್ತಿದ್ದೇವೆ(5Kg ಅಕ್ಕಿ & 5Kg ಅಕ್ಕಿಯ ಹಣ). BJP ಅಧಿಕಾರ ಇರುವ ರಾಜ್ಯದಲ್ಲಿ 10Kg ಅಕ್ಕಿ ಕೊಡುತ್ತಾರಾ? ಕೊಡುತ್ತಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದ್ದಾರೆ.