2022-23 ಸಾಲಿನ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ (PM Kisan Samman Scheme) ರಾಜ್ಯದ ಪಾಲಾಗಿರುವ 4000 ರೂ ಗಳ ಪೈಕಿ 2ನೇ ಕಂತನ್ನು ರಾಜ್ಯ ಸರ್ಕಾರ (State Govt) ಇಂದು ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ವರದಿಯಾಗಿದ್ದು, 975 ಕೋಟಿ ರೂಗಳನ್ನು 48,75,000 ರೈತರ ಖಾತೆಗಳಿಗೆ (farmers accounts) ನೇರವಾಗಿ ಜಮಾ ಮಾಡಲಾಗುವುದೆಂದು ತಿಳಿದು ಬಂದಿದೆ.
ಇದನ್ನು ಓದಿ: ಸ್ವಸಹಾಯ ಗುಂಪುಗಳಿಗೆ 10,000 ರೂ ಮತ್ತು 5 ಲಕ್ಷ ರೂ ಸಾಲ ಸೌಲಭ್ಯ; ಏನಿದು ಯುವಶಕ್ತಿ ಯೋಜನೆ, ಈ ಗುಂಪಿಗೆ ಸಿಗುವ ಸೌಲಭ್ಯಗಳೇನು?
ಕೇಂದ್ರ ಸರ್ಕಾರದ ವಾರ್ಷಿಕ 6000 ರೂಗಳ ಜೊತೆ ರಾಜ್ಯ ಸರ್ಕಾರ ಹೆಚ್ಚುವರಿ 4000 ರೂಗಳನ್ನು ರಾಜ್ಯದ ರೈತರ ಖಾತೆಗೆ ಎರಡು ಕಂತುಗಳನ್ನು ಜಮಾ ಮಾಡುವ ಯೋಜನೆಯನ್ನು ಬಿಜೆಪಿ 2019 ರಲ್ಲಿ ಜಾರಿಗೆ ತಂದಿತ್ತು. ಅದರಂತೆ ಇಂದು ರೈತರ ಖಾತೆಗೆ ಜಮಾ ಆಗುವ ಸಾಧ್ಯತೆಯಿದೆ
ಇದನ್ನು ಓದಿ: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ಯುವನಿಧಿ ಹೆಸರಿನಲ್ಲಿ ಪ್ರತಿ ತಿಂಗಳು 3000ರೂ ನಿರುದ್ಯೋಗ ಭತ್ಯೆ..!
ಪಿಎಂ-ಕಿಸಾನ್ : 14 ನೇ ಕಂತು ಖಾತೆಗೆ ಯಾವಾಗ?
ಇನ್ನು, ಪಿಎಂ-ಕಿಸಾನ್ 14 ನೇ ಕಂತಿನ ವಿತರಣೆಯ ಕುರಿತು ಪ್ರಮುಖ ಮಾಹಿತಿ ಸಿಕ್ಕಿದ್ದು, ಕೇಂದ್ರವು ಏಪ್ರಿಲ್-ಜುಲೈ 2023 ರ ನಡುವೆ ರೈತರ ಖಾತೆಗಳಿಗೆ PM-KISAN 14ನೇ ಕಂತಿನ ರೂ.2000 ಬಿಡುಗಡೆ ಮಾಡುತ್ತದೆ ಎಂದು ತಿಳಿದುಬಂದಿದೆ. ಇದೇ ವೇಳೆ ರೈತರಿಗೆ ಬಂಡವಾಳ ಸಹಾಯಕ್ಕಾಗಿ ತಂದಿರುವ ಈ ಯೋಜನೆ ಮೂಲಕ ಕೇಂದ್ರವು ಪ್ರತಿ ವರ್ಷಕ್ಕೆ ರೂ.2 ಸಾವಿರದಂತೆ ಕಂತುಗಳಲ್ಲಿ ರೂ.6000 ನೀಡುತ್ತಿರುವುದು ಗೊತ್ತೇ ಇದೆ.
ಇದನ್ನು ಓದಿ: ವೀಕೆಂಡ್ ವಿತ್ ರಮೇಶ್ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್
ಖಾತೆಗೆ ₹2000 ಜಮಾ ಆಗಿಲ್ವಾ..? ಹೀಗೆ ಮಾಡಿ..
ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Scheme) ಅಡಿಯಲ್ಲಿ ಕಳೆದ ತಿಂಗಳು 27ರಂದು ಅರ್ಹ ರೈತರ ಬ್ಯಾಂಕ್ ಖಾತೆಗೆ ಕೆಂದ್ರ ಸರ್ಕಾರ ₹2000 ಜಮೆ ಮಾಡಿದ್ದು, ಈ ಪಟ್ಟಿಯಲ್ಲಿ ಫಲಾನುಭವಿಗಳ ಕೆಲವು ಖಾತೆಗಳಲ್ಲಿ ಹಣ ಜಮಾ ಆಗಿಲ್ಲ.
ಇದನ್ನು ಓದಿ: ಸರ್ಕಾರದ ಅದ್ಬುತ ಯೋಜನೆ: ತಿಂಗಳಿಗೆ 200 ರೂ ಕಟ್ಟಿದರೆ ಸಾಕು, ಪ್ರತಿ ತಿಂಗಳು 5 ಸಾವಿರ ರೂ, ಒಂದೇ ಬಾರಿಗೆ 8.5 ಲಕ್ಷ ರೂ.!
ಅಂತಹ ಫಲಾನುಭವಿಗಳು pmkisan.gov.in ವೆಬ್‌ಸೈಟ್‌ನಲ್ಲಿ ತಮ್ಮ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ವಿವರಗಳನ್ನು ಸರಿಯಾಗಿ ಪರಿಶೀಲಿಸಿ. ಇಲ್ಲವೇ, 155261, 1800115526, 011-23381092 ಸಂಖ್ಯೆಗಳಿಗೆ ಸಂಪರ್ಕಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ಇದನ್ನು ಓದಿ: ಭರ್ಜರಿ ಗುಡ್ ನ್ಯೂಸ್: ನಿಮ್ಮ ಖಾತೆಗೆ ಹಣ, ಈಗಲೇ ಚೆಕ್ ಮಾಡಿ