Gold Rate Today: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಆತಂಕದ (Iran-Israel conflict) ಹಿನ್ನೆಲೆಯಲ್ಲಿ ಶನಿವಾರ ದಿಢೀರ್ ಏರಿಕೆಯಾಗಿದ್ದ ಚಿನ್ನದ ಬೆಲೆ, ಇದೀಗ ಗ್ರಾಹಕರಿಗೆ ಅಚ್ಚರಿಯ ಸಿಹಿ ಸುದ್ದಿ ನೀಡಿದೆ. ವಾರದ ಆರಂಭದಲ್ಲೇ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಆಭರಣ ಖರೀದಿಗೆ ಕಾಯುತ್ತಿದ್ದವರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ರಾಜಧಾನಿ ಬೆಂಗಳೂರಿನ ಬುಲಿಯನ್ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರಗಳ ಸಂಪೂರ್ಣ ವಿವರ ಇಲ್ಲಿದೆ:

24 ಕ್ಯಾರೆಟ್ (ಶುದ್ಧ) ಚಿನ್ನ: 10 ಗ್ರಾಂ ಶುದ್ಧ ಚಿನ್ನದ ಬೆಲೆಯಲ್ಲಿ ಭರ್ಜರಿ ₹3,290 ರಷ್ಟು ಕುಸಿತ ಕಂಡಿದೆ. ಇದರೊಂದಿಗೆ ಸದ್ಯ ಮಾರುಕಟ್ಟೆಯಲ್ಲಿ 24K ಚಿನ್ನದ ಬೆಲೆ ₹1,69,800 ಕ್ಕೆ ತಲುಪಿದೆ.
22 ಕ್ಯಾರೆಟ್ (ಆಭರಣ) ಚಿನ್ನ: ಆಭರಣ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಕೂಡ ₹3,000 ರಷ್ಟು ಭಾರೀ ಇಳಿಕೆಯಾಗಿದೆ. ಇಂದಿನ ದರ 10 ಗ್ರಾಂಗೆ ₹1,55,650 ಕ್ಕೆ ಇಳಿಕೆಯಾಗಿದೆ.
ರಾಜ್ಯಾದ್ಯಂತ ಇದೇ ದರ: ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಬಹುತೇಕ ಇದೇ ದರ ಅನ್ವಯವಾಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ದಿಢೀರ್ ಬದಲಾವಣೆಗಳಿಂದಾಗಿ ಚಿನ್ನದ ಬೆಲೆಯಲ್ಲಿ ಈ ತೀವ್ರ ಕುಸಿತ ಕಂಡುಬಂದಿದೆ. ಮದುವೆ ಹಾಗೂ ಶುಭಕಾರ್ಯಗಳ ಸೀಸನ್‌ನಲ್ಲಿ ಚಿನ್ನದ ಬೆಲೆ ಪಾತಾಳಕ್ಕಿಳಿದಿರುವುದು ಗ್ರಾಹಕರಿಗೆ ದೊಡ್ಡ ರಿಲೀಫ್ ನೀಡಿದೆ.




