ಕಳೆದ 4 ದಿನಗಳಿಂದ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಕಾಣುತ್ತಿದೆ. ಇಂದು ಕೂಡ ಬಂಗಾರದ ಬೆಲೆ 100 ರೂ ಏರಿಕೆಯಾಗಿದ್ದು, ಬೆಳ್ಳಿ ಬೆಲೆ ಮಾತ್ರ 500 ರೂ ಇಳಿತವಾಗಿದೆ.
ಹೌದು, ನಿನ್ನೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,750 ರೂ ಇದ್ದುದು ಇಂದು 47,850 ರೂ ಆಗಿದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನ 52,100 ರೂ ಇದ್ದುದು 52,200 ರೂ ಆಗಿದೆ. ಬೆಂಗಳೂರು, ಮಂಗಳೂರು & ಮೈಸೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,000 ರೂ ಇದ್ದು, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 52,250 ರೂ ಇದ್ದು, ನಿನ್ನೆ 1 ಕೆಜಿ ಬೆಳ್ಳಿ ಬೆಲೆ 62,000 ರೂ ಇದ್ದುದು ಇಂದು 61,500 ರೂ ಆಗಿದೆ.
ಇನ್ನು, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಹೀಗಿದ್ದು, ಚೆನ್ನೈ- 48,400 ರೂ, ಮುಂಬೈ- 47,850 ರೂ, ದೆಹಲಿ- 48,000 ರೂ, ಕೊಲ್ಕತ್ತಾ- 47,850 ರೂ, ಹೈದರಾಬಾದ್- 47,850 ರೂ ದಾಖಲಾಗಿದೆ.