ಚಿನ್ನದ ಬೆಲೆ ಮತ್ತೆ ಗಗನಕ್ಕೆ; ಚಿನ್ನದ ಬೆಲೆ 700 ರೂ ಏರಿಕೆ

ಅಮೆರಿಕ ಪ್ರಮುಖ ಮೂರು ಬ್ಯಾಂಕ್‌ಗಳು ದಿವಾಳಿಯಾಗಿರುವ ಕಾರಣ ಕಳೆದ ಮೂರು ದಿನದಿಂದ ಕೇವಲ ಭಾರತದ್ದಷ್ಟೇ ಅಲ್ಲ ಜಾಗತಿಕವಾಗಿಯೂ ಚಿನ್ನದ ಬೆಲೆ ಏರಿಕೆಯಾಗಿದೆ. ಹೌದು,ಭಾರತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 700 ಏರಿಕೆಯಾಗಿದ್ದು,…

gold silver price

ಅಮೆರಿಕ ಪ್ರಮುಖ ಮೂರು ಬ್ಯಾಂಕ್‌ಗಳು ದಿವಾಳಿಯಾಗಿರುವ ಕಾರಣ ಕಳೆದ ಮೂರು ದಿನದಿಂದ ಕೇವಲ ಭಾರತದ್ದಷ್ಟೇ ಅಲ್ಲ ಜಾಗತಿಕವಾಗಿಯೂ ಚಿನ್ನದ ಬೆಲೆ ಏರಿಕೆಯಾಗಿದೆ.

ಹೌದು,ಭಾರತದಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 700 ಏರಿಕೆಯಾಗಿದ್ದು, 53,200 ರೂ.ಗೆ ತಲುಪಿದೆ. 24 ಕ್ಯಾರೆಟ್‌ನ 10 ಗ್ರಾಂ ಬಂಗಾರದ ದರ 760 ರೂ.ಗೆ ಏರಿಕೆ ಕಂಡಿದೆ. ಈ ಮೂಲಕ ಕೆಲವೇ ಎರಡು ದಿನಗಳಲ್ಲಿ ಚಿನ್ನದ ಬೆಲೆ 1000 ರೂ. ಹೆಚ್ಚಾಗಿದೆ. ಇನ್ನೂ, ಬೆಳ್ಳಿ ಬೆಲೆ ಇಂದು 2,500 ರೂ. ಏರಿಕೆಯಾಗಿದ್ದು, 72,000 ರೂ. ಆಗಿದೆ.

ಇದನ್ನು ಓದಿ: ಅನ್ನದಾತರೇ: ಈ ರೀತಿ ಮಾಡಿದ್ರೆ ನಿಮ್ಮ ಖಾತೆ ಸೇರುತ್ತೆ ಬರೋಬ್ಬರಿ 42 ಸಾವಿರ; ಸರ್ಕಾರದ ಈ ಹಣವನ್ನು ನಿಮ್ಮದಾಗಿಸಿಕೊಳ್ಳಿ!

Vijayaprabha Mobile App free

ಶನಿವಾರವಷ್ಟೇ ಬೆಲೆಗಳು 51 ಸಾವಿರ ಮಟ್ಟಕ್ಕಿಂತ ಕಡಿಮೆ ಇತ್ತು. ಈಗ ಭಾರತದ ಎಲ್ಲಾ ನಗರಗಳಲ್ಲೂ 22 ಕ್ಯಾರಟ್ ಚಿನ್ನದ ಬೆಲೆ 52 ಸಾವಿರ ರೂ ಗಡಿ ದಾಟಿ ಹೋಗಿದೆ. ತಜ್ಞರ ಪ್ರಕಾರ ಇನ್ನೂ ಬಹಳಷ್ಟು ದಿನ ಬೆಲೆ ಏರಿಕೆ ಟ್ರೆಂಡ್‌ ಮುಂದುವರೆಯಲಿದೆ.

ಇದನ್ನು ಓದಿ: ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯಾ? ಆಧಾರ್ ಸಂಖ್ಯೆ ಕೂಡ ಗೊತ್ತಿಲ್ವಾ? ಆದರೂ ಡೌನ್‌ಲೋಡ್ ಮಾಡಿಕೊಳ್ಳಿ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.