ಚಿನ್ನ-ಬೆಳ್ಳಿ ಬೆಲೆ ಕಳೆದ ಕೆಲ ದಿನಗಳಿಂದ ಏರಿಳಿತ ಕಾಣುತ್ತಿದ್ದು, ಭಾರತದಲ್ಲಿ ಬೆಳ್ಳಿ ದಿಢೀರ್ ಕುಸಿತವಾಗಿದೆ. ಚಿನ್ನದ ಬೆಲೆ ಇಂದು 50 ರೂ ಏರಿಕೆ ಕಂಡರೆ, ಬೆಳ್ಳಿ ಬೆಲೆ 900 ರೂ. ಕುಸಿತವಾಗಿದ್ದು, 1 ಕೆಜಿ ಬೆಳ್ಳಿ ಬೆಲೆ 57,600 ರೂ ಇದ್ದುದು ಇಂದು 56,700 ರೂ. ಆಗಿದೆ.
ಇನ್ನು ಕಳೆದ 2 ದಿನಗಳಿಂದ ಕುಸಿತವಾಗಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನದ ಬೆಲೆ 47,900 ರೂ. ಇದ್ದುದು 47,950 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,200 ರೂ. ಇದ್ದುದು 52,250 ರೂ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದ್ದು, ಚೆನ್ನೈ- 48,380 ರೂ. ಮುಂಬೈ, ಕೊಲ್ಕತ್ತಾ, ಹೈದರಾಬಾದ್- 47,900 ರೂ, ದೆಹಲಿ- 48,050 ರೂ,ಬೆಂಗಳೂರು, ಮಂಗಳೂರು, ಮೈಸೂರು- 47,950 ರೂ ದಾಖಲಾಗಿದೆ.