Gold price | ಸಾರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ; ಇಂದಿನ ಚಿನ್ನದ ಬೆಲೆ ಎಷ್ಟು?

Gold price | ಚಿನ್ನದ ಬೆಲೆ ಇಂದು ಭಾರೀ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಬರೆದಿದ್ದು, ಇಂದು ಬೆಂಗಳೂರು ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 3,330 ರೂ. ಏರಿಕೆಯಾಗಿ 1,32,770…

Gold price today

Gold price | ಚಿನ್ನದ ಬೆಲೆ ಇಂದು ಭಾರೀ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಬರೆದಿದ್ದು, ಇಂದು ಬೆಂಗಳೂರು ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 3,330 ರೂ. ಏರಿಕೆಯಾಗಿ 1,32,770 ರೂ.ಗೆ ತಲುಪಿದೆ.

7 ದಿನಗಳಲ್ಲಿ 9,060 ರೂ. ಏರಿಕೆಯಾಗಿರುವುದು ಗಮನಾರ್ಹ. ಅಂತೆಯೇ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 3,050 ರೂ. ಏರಿಕೆಯಾಗಿ 1,21,700 ರೂ.ಗೆ ತಲುಪಿದೆ. ಆದರೆ ಬೆಳ್ಳಿಯ ಬೆಲೆ ಕೆಜಿಗೆ 100 ರೂ. ಕಡಿಮೆಯಾಗಿದೆ. ಕೆಜಿ ಬೆಳ್ಳಿಯ ದರ 1,93,900 ರೂ. ಇದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ

ಇನ್ನು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ(COMEX) ಚಿನ್ನದ ಬೆಲೆಗಳು ದಾಖಲೆ ಬರೆದಿದೆ. ನಿನ್ನೆ ಒಂದು ಔನ್ಸ್ $4250 ಇದ್ದರೆ, ಇಂದು ಅದು $4300 ದಾಟಿದೆ.

Vijayaprabha Mobile App free

ಇದಲ್ಲದೇ, ಮಾರುಕಟ್ಟೆ ಮೌಲ್ಯ $30 ಟ್ರಿಲಿಯನ್‌ಗಳನ್ನು ದಾಟಿದೆ. ಚಿನ್ನದ ಬೆಲೆ $4300 ದಾಟಿದ್ದು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ. US-ಚೀನಾ ವಾಣಿಜ್ಯ ಯುದ್ಧ, ರಷ್ಯಾ-ಉಕ್ರೇನ್ ಯುದ್ಧದಂತಹ ಜಾಗತಿಕ ಒತ್ತಡಗಳಿಂದಾಗಿ ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಆಸ್ತಿಯೆಂದು ಪರಿಗಣಿಸುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.