ದೇಶದ ಚಿನಿವಾರ ಪೇಟೆಯಲ್ಲಿ ಕಳೆದ ಎರಡು ದಿನಗಳಿಂದ ಚಿನ್ನದ ದರದಲ್ಲಿ ಭಾರೀ ಇಳಿಕೆಯಾಗಿದ್ದು, ಇಂದು ಗ್ರಾಂ ಚಿನ್ನದ ಮೇಲೆ 110 ರೂ. ಕಡಿಮೆಯಾಗಿದೆ. ಬೆಳ್ಳಿಯ ಮೇಲೂ 200 ರೂ. ಕುಸಿತ ಕಂಡಿದೆ.
ಹೌದು, 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹100 ಇಳಿಕೆಯಾಗಿ ₹47,900 ಇದ್ದು, 24 ಕ್ಯಾ. ಚಿನ್ನದ ದರ 10 ಗ್ರಾಂಗೆ ₹110 ಕಡಿಮೆಯಾಗಿ ₹52,250 ಆಗಿದ್ದು, 1 ಕೆಜಿ ಬೆಳ್ಳಿ ಬೆಲೆ ಬರೋಬ್ಬರಿ ₹200 ಇಳಿಕೆಯಾಗಿ ₹57,600 ದಾಖಲಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾ.10 ಗ್ರಾಂ ಚಿನ್ನದ ಬೆಲೆ ₹100 ಕಡಿಮೆಯಾಗಿ ₹47,950 ಆಗಿದ್ದು, 1 ಕೆಜಿ ಬೆಳ್ಳಿ ಬೆಲೆ ₹100 ಕಡಿಮೆಯಾಗಿ ₹63,300 ಆಗಿದೆ. ಇನ್ನು, ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾ. ಚಿನ್ನದ ಬೆಲೆ ಹೀಗಿದ್ದು, ಚೆನ್ನೈ- 48,490 ರೂ. ಮುಂಬೈ, ಕೊಲ್ಕತ್ತಾ, ಹೈದರಾಬಾದ್- 47,900 ರೂ, ದೆಹಲಿ- 48,050 ರೂ ದಾಖಲಾಗಿದೆ.