ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಚಿನ್ನದ ಬಾಂಡ್ ಇಂದಿನಿಂದಲೇ ಖರೀದಿಗೆ ಲಭ್ಯವಿದ್ದು, ಆಗಸ್ಟ್ 26ರವರೆಗೆ ಖರೀದಿಗೆ ಅವಕಾಶ ಇರುತ್ತದೆ.
ಒಂದು ಗ್ರಾಂ ಚಿನ್ನಕ್ಕೆ ಆರ್‌ಬಿಐ 5,197 ರೂ ನಿಗದಿಪಡಿಸಿದ್ದು, ಎಸ್ಬಿಐ ಸೇರಿ ಹಲವು ಬ್ಯಾಂಕುಗಳು ಡಿಜಿಟಲ್ ರೂಪದಲ್ಲಿ ಬಾಂಡ್ ಖರೀದಿಗೆ ಅವಕಾಶ ಕಲ್ಪಿಸಿವೆ. ಇನ್ನು, ಡಿಮ್ಯಾಟ್ ಖಾತೆ ಇರುವವರು ಆ ಖಾತೆಗೆ ಬಾಂಡ್ ಜಮಾ ಮಾಡಿಸಿಕೊಳ್ಳಬಹುದಾಗಿದ್ದು, ಡಿಜಿಟಲ್ ರೂಪ ಆದರೆ 50 ರೂ.ರಿಯಾಯ್ತಿ ಇರುತ್ತದೆ.
ಗೋಲ್ಡ್ ಬಾಂಡ್ ಬಗ್ಗೆ ತಿಳಿಯಬೇಕಾದ ಅಂಶಗಳು:
*ಪ್ರತಿ ಬಾಂಡ್ 1 ಗ್ರಾಂ ಚಿನ್ನದ ಮೌಲ್ಯ ಹೊಂದಿರುತ್ತದೆ. ಬಾಂಡ್ನ ಬೆಲೆಯನ್ನು ಚಿನ್ನದ ಬೆಲೆ ಆಧರಿಸಿಯೇ ನಿಗದಿಪಡಿಸಲಾಗುತ್ತದೆ. ವರ್ಷಕ್ಕೆ ಶೇ 2.5ರ ಬಡ್ಡಿ ನೀಡಲಾಗುತ್ತದೆ
*ಬಾಂಡ್ ಖರೀದಿಸಿದ 5ನೇ ವರ್ಷದ ಬಳಿಕ ಬಾಂಡ್ ಮಾರಾಟಕ್ಕೆ ಅವಕಾಶವಿರುತ್ತದೆ. ಬಾಂಡ್ಗಳ ಪರಿಪಕ್ವತಾ ಅವಧಿ 8 ವರ್ಷ
*ವ್ಯಕ್ತಿ ಮತ್ತು ಅವಿಭಕ್ತ ಕುಟುಂಬಕ್ಕೆ 4 ಕೆಜಿ ಖರೀದಿ ಮಿತಿಯಿದೆ
*ಚಿನ್ನದ ಬಾಂಡ್ ಖರೀದಿಗೆ ಕೆವೈಸಿ ಮಾಡಿಸುವುದು ಕಡ್ಡಾಯ
*ಉಳಿತಾಯ ಮತ್ತು ಹೂಡಿಕೆಗಾಗಿ ಚಿನ್ನ ಖರೀದಿಸುವವರಿಗೆ ಇದು ಅತ್ಯುತ್ತಮ ಆಯ್ಕೆ.