Garlic price hike : ಈರುಳ್ಳಿ, ಟೊಮೆಟೋ ಬಳಿಕ ಈಗ ಬೆಳ್ಳುಳ್ಳಿಯ ದರ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಕೆಲವಡೆ ಈಗಾಗಲೇ ಕೆಜಿಗೆ ₹400 ಮಾರಾಟ ಮಾಡಲಾಗುತ್ತಿದೆ.
ಹೌದು, ಚಿಲ್ಲರೆ ಮಾರುಕಟ್ಟೆಯಲ್ಲಿ ಮೊದಲ ದರ್ಜೆ ಬೆಳ್ಳುಳ್ಳಿ ದರ ಕೆಜಿಗೆ ಗರಿಷ್ಟ ₹350-₹370 ಬೆಳೆಯಿದ್ದು, ಕೆಲವಡೆ ಈಗಾಗಲೇ ಕೆಜಿಗೆ ₹400 ಇದೆ. ಹೊರರಾಜ್ಯಗಳಿಂದ ಕಡಿಮೆ ಸರಬರಾಜು ಆಗುತ್ತಿರುವುದು ದರ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ & ಮಹಾರಾಷ್ಟ್ರದಿಂದ ಬೆಳ್ಳುಳ್ಳಿ ಬರುತ್ತದೆ. ಆದರೆ ಈ ಬಾರಿ UP ಮತ್ತು ಗುಜರಾತ್‌ನಲ್ಲಿ ಮಳೆಯ ಕೊರತೆಯಾಗಿದೆ. ಹೀಗಾಗಿ ಆಮದಿನಲ್ಲಿ ತೀವ್ರ ಕುಸಿತವಾಗಿದೆ. ಇದೇ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ. ನವೆಂಬರ್ ಹೊತ್ತಿಗೆ ಗಗನಕ್ಕೇರುವ ಎಲ್ಲ ಲಕ್ಷಣಗಳಿವೆ ಎಂದು ವರ್ತಕರು ಹೇಳುತ್ತಿದ್ದಾರೆ.