ಬೆಂಗಳೂರು: ರಾಜ್ಯದಲ್ಲಿ ಸಿಎಸ್ ಸಿ (CSC) ಮುಖಾಂತರ ಜನರಿಗೆ ತ್ವರಿತಗತಿಯಲ್ಲಿ ಆಧಾರ ಸೇವೆಗಳು (Aadhaar services) ಸಿಗುತ್ತಿವೆ ಎಂದು ಸಿಎಸಸಿ ರಾಜ್ಯ ಸಹ ವ್ಯವಸ್ಥಾಪಕರಾದ ಗಜಾನನ ನಾಯ್ಕ್ (Gajanan Naik) ಅವರು ಹೇಳಿದರು.

ಹೌದು, ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಆಧಾರ ತರಭೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಗಜಾನನ ನಾಯ್ಕ್ ಅವರು, ನಾವು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಆಧಾರ್ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಆರ್.ಡಿ.ಪಿ.ಆರ್ (RDPR), ವಿಎಲ್ಇಗಳು (VLE) ಸೇರಿ ಜನರಿಗೆ ಹೊರೆಯಾಗದಂತೆ ಸಿ ಎಸ್ ಸಿ ಸೇವೆಗಳು ಸಿಗುತ್ತಿವೆ ಎಂದು ಹೇಳಿದರು.

ಇನ್ನು, ಆಧಾರ ಡಾಕ್ಯುಮೆಂಟ್ (Aadhaar Document) ಅಪ್‌ಲೋಡ್ ಮತ್ತು ದೋಷ ಮತ್ತು ದಂಡದ ಹೊಸ ಅಭಿವೃದ್ಧಿ ಮತ್ತು ಆಧಾರ್‌ನಲ್ಲಿನ ಬದಲಾವಣೆಗಳ ಕುರಿತು ವಿವರವಾದ ತರಬೇತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಿಎಸಸಿ ರಾಜ್ಯ ವ್ಯವಸ್ಥಾಪಕರಾದ ವಿಭಾಸಕುಮಾರ್, ಯುಐಡಿಎಐ, ಪ್ರಾದೇಶಿಕ ಕಛೇರಿ ಬೆಂಗಳೂರಿನ ಅನುಪ್ ಕೆ, ರಾಗವೇಂದ್ರ ಎಸ್, ಪವನ್ ಕುಮಾರ್ ಪಹ್ವಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸೇರಿದಂತೆ, ರಾಜ್ಯದ ವಿವಿದೆಡೆಯಿಂದ ಆಗಮಿಸಿದ ಸಿಎಸ್ ಇ ವಿಎಲ್ಇಗಳು ಭಾಗವಹಿಸಿದ್ದರು.




