ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ 4000ಕ್ಕೂ ಹೆಚ್ಚು ರೈಲು ನಿಲ್ದಾಣದಲ್ಲಿ ವೈ-ಫೈ ಸೇವೆಯನ್ನು ಆರಂಭಿಸಿದ್ದು, ಪ್ರಯಾಣಿಕರು ಹೆಚ್ಚು ವೇಗದ ವೈ-ಫೈ ಸೇವೆ ಉಪಯೋಗಿಸಲು ಪ್ರೀಪೇಯ್ಡ್ ಯೋಜನೆ ಘೋಷಣೆ ಮಾಡಲಾಗಿದೆ.
ಭಾರತೀಯ ರೈಲ್ವೆ ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದು, ವೈ-ಫೈ ಸೌಲಭ್ಯ ಬಳಕೆ ಮಾಡಲು ರೈಲ್ ಟೆಲ್ ಪ್ರಿಪೇಯ್ಡ್ ಯೋಜನೆ ಬಿಡುಗಡೆ ಮಾಡಿದೆ. ಪ್ರಯಾಣಿಕರು ಈ ಪ್ರೀಪೇಯ್ಡ್ ಪ್ಲಾನ್ ಮೂಲಕ 1 mbps ವೇಗದಲ್ಲಿ ದಿನದಲ್ಲಿ ಮೊದಲ 30 ನಿಮಿಷ ಉಚಿತವಾಗಿ ಬಳಸಬಹುದು.
ಆದರೆ, 34mbps ವರೆಗಿನ ಹೆಚ್ಚಿನ ವೇಗಕ್ಕಾಗಿ ಬಳಕೆದಾರನು ನಾಮಮಾತ್ರ ಶುಲ್ಕದಲ್ಲಿ ಒಂದು ಯೋಜನೆಯನ್ನು ಆಯ್ಕೆ ಮಾಡಬೇಕಾಗಿದ್ದು, 5 ಜಿಬಿ ಡೇಟಾಕ್ಕೆ ₹10, 10 ಜಿಬಿ ಡೇಟಾಕ್ಕೆ ₹15, ಐದು ದಿನಗಳಿಗೆ 10 ಜಿಬಿ ಡೇಟಾಕ್ಕೆ ₹20 ಹಾಗೂ 5 ದಿನಗಳಿಗೆ 30 ಜಿಬಿ ಡೇಟಾಕ್ಕೆ ₹30 ಪಾವತಿಸಬೇಕಾಗುತ್ತದೆ.