ದೇಶದಲ್ಲಿ ಚಿನ್ನದ ದರವು ಪ್ರತಿನಿತ್ಯ ಏರಿಳಿತ ಕಾಣುತ್ತಿದ್ದು, ಚಿನ್ನವನ್ನು ಸಂಸ್ಕರಿಸಿ, ಪುನರ್ಬಳಕೆ ಮಾಡುವಲ್ಲಿ ಭಾರತವು ಜಗತ್ತಿನಲ್ಲಿ 4ನೇ ಸ್ಥಾನದಲ್ಲಿದೆ ಎಂದು ವಿಶ್ವ ಚಿನ್ನ ಸಮಿತಿ ( ಡಬ್ಲ್ಯುಜಿಸಿ ) ವರದಿ ಮಾಡಿದೆ.
ಹೌದು, 2013ರಿಂದ 2021ರ ನಡುವಿನ ಅವಧಿಯಲ್ಲಿ ದೇಶದ ಚಿನ್ನ ಸಂಸ್ಕರಣೆ ಸಾಮರ್ಥ್ಯವು 500ರ% ಹೆಚ್ಚಳ ಕಂಡಿದೆ ಎಂದು WGC ಬಿಡುಗಡೆ ಮಾಡಿರುವ ‘ಚಿನ್ನದ ಸಂಸ್ಕರಣೆ ಹಾಗೂ ಪುನರ್ಬಳಕೆ’ ವರದಿಯಲ್ಲಿ ಉಲ್ಲೇಖವಾಗಿದೆ.
ಕಳೆದ ಐದು ವರ್ಷಗಳಲ್ಲಿ ದೇಶಕ್ಕೆ ಪೂರೈಕೆಯಾದ ಒಟ್ಟು ಚಿನ್ನದಲ್ಲಿ 11% ‘ಹಳೆಯ ಚಿನ್ನ’ದ ಪುನರ್ಬಳಕೆಯಿಂದ ಸಿಕ್ಕಿದ್ದು ಎಂದು ವರದಿಯು ಹೇಳಿದೆ.
ಭಾರತಕ್ಕೆ ಚಿನ್ನದ ಪುನರ್ಬಳಕೆಗೆ ನಾಲ್ಕನೆಯ ಸ್ಥಾನ
ಇನ್ನು, 2013 ರಿಂದ 2021 ರ ನಡುವಿನ ಅವಧಿಯಲ್ಲಿ ದೇಶದ ಚಿನ್ನ ಸಂಸ್ಕರಣೆ ಸಾಮರ್ಥ್ಯವು ಶೇಕಡ 500 ರಷ್ಟು ಹೆಚ್ಚಳ ಕಂಡಿದ್ದು, ಚಿನ್ನವನ್ನು ಸಂಸ್ಕರಿಸಿ, ಪುನರ್ಬಳಕೆ ಮಾಡುವಲ್ಲಿ ಭಾರತವು ಜಗತ್ತಿನಲ್ಲಿ ನಾಲ್ಕನೆಯ ಸ್ಥಾನದಲ್ಲಿದೆ ಎಂದು ವಿಶ್ವ ಚಿನ್ನ ಸಮಿತಿಯು ( ಡಬ್ಲ್ಯುಜಿಸಿ ) ಹೇಳಿದೆ .