ಪೋರ್ನ್ ತಾರೆಗೆ ರಹಸ್ಯ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ತಲುಪಿದ ತಕ್ಷಣ ಟ್ರಂಪ್ ಅವರನ್ನು ಅರೆಸ್ಟ್ ಮಾಡಲಾಗಿದೆ.
ಮಾರ್ಚ್ 30 ರಂದು ಪೋರ್ನ್ ತಾರೆ ಸ್ಟಾರ್ಮಿ ಡೇನಿಯಲ್ಸ್‌ಗೆ ರಹಸ್ಯವಾಗಿ ಹಣ ನೀಡಿದ ಪ್ರಕರಣ ಸಂಬಂಧ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಆರೋಪ ಹೊರಿಸಲಾಗಿತ್ತು. ಕ್ರಿಮಿನಲ್ ಕೇಸ್‌ನಲ್ಲಿ ವಿಚಾರಣೆ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಟ್ರಂಪ್ ಆಗಿದ್ದಾರೆ.
ಇದನ್ನು ಓದಿ: SSCಯಿಂದ 7,500 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಅಹ್ವಾನ, Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ
ಏನದು ಪೋರ್ನ್ ಸ್ಟಾರ್-ಟ್ರಂಪ್ ಕೇಸ್?
ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ 2006ರಲ್ಲಿ ಪೋರ್ನ್ ತಾರೆ ಸ್ಟಾರ್ಮಿ ಡೇನಿಯಲ್ಸ್ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದರು ಎಂದು ಆರೋಪಿಸಲಾಗಿತ್ತು. ಈ ಆರೋಪ ಅವರಿಗೆ 2016ರ ಚುನಾವಣೆ ಹೊತ್ತಲ್ಲಿ ಮುಳುವಾಗುವ ಸಾಧ್ಯತೆಯಿತ್ತು. ಆಗ ಸ್ಟಾರ್ಮಿ ಬಾಯಿ ಮುಚ್ಚಿಸಲು ಟ್ರಂಪ್ ಭಾರೀ ಮೊತ್ತದ ಹೆಚ್ಚು ಹಣ ನೀಡಿದ್ದರು ಎನ್ನಲಾಗಿತ್ತು.
ಅಮೆರಿಕದ ಕಾನೂನಿನಲ್ಲಿ ಈ ರೀತಿ ಹಣ ಪಾವತಿ ಕಾನೂನು ಬದ್ಧ ಎನ್ನಲಾಗಿದೆಯಾದರೂ, ಡೊನಾಲ್ಡ್ ಟ್ರಂಪ್ ಹಣ ಪಾವತಿಸಿದ ರೀತಿ ಕಾನೂನು ಬದ್ಧವಲ್ಲ ಎಂಬ ಆರೋಪ ಕೇಳಿಬಂದಿತ್ತು.
ಇದನ್ನು ಓದಿ: LPG ಗ್ರಾಹಕರಿಗೆ ಭಾರೀ ಸಬ್ಸಿಡಿ..ಕೇವಲ 500ರೂಗೆ LPG ಸಿಲಿಂಡರ್, 200 ರೂ ಸಬ್ಸಿಡಿ!