ಕಲಬುರಗಿ : ಕಾಂಗ್ರೆಸ್ ನಾಯಕ, ಮಾಜಿ ಸಚಿವ ಹಾಗೂ ಗುರುಮಠಕಲ್ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರ ಕಾರು ಭೀಕರ ಅಪಘಾತವಾದ ಘಟನೆ ಕಲಬುರಗಿಯ ಆಕಾಶವಾಣಿ ಕೇಂದ್ರದ ಬಳಿ ನಡೆದಿದೆ.
ಇದನ್ನು ಓದಿ: VIMUL ನಲ್ಲಿ ವಿವಿಧ ಹುದ್ದೆಗಳು; ಎಸ್‌ಎಸ್‌ಎಲ್‌ಸಿ, ಐಟಿಐ, ಪದವಿ ವಿದ್ಯಾರ್ಹತೆ, 25 ಏಪ್ರಿಲ್ ಕೊನೆ ದಿನ
ಹೌದು, ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಅವರಿದ್ದ ಕಾರು ಭೀಕರ ಅಪಘಾತವಾಗಿರುವ ಘಟನೆ ನಡೆದಿದ್ದು, ತಡರಾತ್ರಿ 12.30 ರ ಸುಮಾರಿಗೆ ಕಲಬುರಗಿಯ ಆಕಾಶವಾಣಿ ಕೇಂದ್ರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದೆ.
ಇದನ್ನು ಓದಿ: ಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ನ್ಯೂಸ್: ಪ್ಯಾನ್-ಆಧಾರ್ ಲಿಂಕ್ ಆಯ್ಕೆಯಲ್ಲಿ ಭಾರಿ ಬದಲಾವಣೆ!
ನಿದ್ರೆ ಮಂಪರಿನಲ್ಲಿ ಚಾಲಕ ಕಾರನ್ನು ಓಡಿಸುವಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಬಾಬುರಾವ್ ಚಿಂಚನಸೂರು ಕಾಲು, ಮುಖಕ್ಕೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಕಲಬುರಗಿಯ ಯನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಪ್ರಧಾನಮಂತ್ರಿ ಟ್ರ್ಯಾಕ್ಟರ್ ಯೋಜನೆ: ಅದ್ಭುತ ಅವಕಾಶ, ಅರ್ಧ ಬೆಲೆಗೆ ಟ್ರ್ಯಾಕ್ಟರ್; ಅರ್ಹತೆ, ಅರ್ಜಿ ವಿವರ ಇಲ್ಲಿದೆ!