ಅಮೆಜಾನ್​ನಿಂದ ಆಹಾರ ಮೇಳ: ಭರ್ಜರಿ ಆಫರ್ ಜೊತೆಗೆ ಶೇ.60ರಷ್ಟು ಡಿಸ್ಕೌಂಟ್

ಅಮೆಜಾನ್ ತನ್ನ ಗ್ರಾಹಕರಿಗಾಗಿ ನಾಲ್ಕನೇ ಆವೃತ್ತಿಯ ಆಹಾರ ಮೇಳವನ್ನು ಆರಂಭಿಸಿದ್ದು, ಸೆಪ್ಟೆಂಬರ್ 11 ರವರೆಗೆ ಈ ಮೇಳ ನಡೆಯಲಿದೆ. ಈಗಾಗಲೇ ಪ್ರಾರಂಭವಾಗಿರುವ ಆಹಾರ ಮೇಳವು ಒಟ್ಟು 10 ದಿನಗಳ ಕಾಲ ಇರಲಿದೆ. ಈ ಆಹಾರ…

amazon-vijayaprabha-news

ಅಮೆಜಾನ್ ತನ್ನ ಗ್ರಾಹಕರಿಗಾಗಿ ನಾಲ್ಕನೇ ಆವೃತ್ತಿಯ ಆಹಾರ ಮೇಳವನ್ನು ಆರಂಭಿಸಿದ್ದು, ಸೆಪ್ಟೆಂಬರ್ 11 ರವರೆಗೆ ಈ ಮೇಳ ನಡೆಯಲಿದೆ. ಈಗಾಗಲೇ ಪ್ರಾರಂಭವಾಗಿರುವ ಆಹಾರ ಮೇಳವು ಒಟ್ಟು 10 ದಿನಗಳ ಕಾಲ ಇರಲಿದೆ.

ಈ ಆಹಾರ ಮೇಳದ ಅಂಗವಾಗಿ ಗ್ರಾಹಕರಿಗೆ ಸಾಕಷ್ಟು ಕೊಡುಗೆ ನೀಡಲಾಗಿದ್ದು, ಡೊಮಿನೋಸ್, ಮೆಕ್‌ಡೊನಾಲ್ಡ್ಸ್, ಬರ್ಗರ್ ಕಿಂಗ್, ಸಬ್‌ವೇ, ಬೆಹ್ರೂಜ್ ಬಿರಿಯಾನಿ, ಫ್ರೆಶ್‌ಮೆನು, ಬಾಸ್ಕಿನ್ ರಾಬಿನ್ಸ್ ಮತ್ತು ಮೇಘನಾ ಫುಡ್ಸ್, ಎಂಪೈರ್ ರೆಸ್ಟೋರೆಂಟ್, ಒನೆಸ್ಟಾ ಸೇರಿದಂತೆ ಹಲವು ರೆಸ್ಟೋರೆಂಟ್‌ ನಲ್ಲಿ ಆರ್ಡರ್ಮಾಡಬಹುದಾಗಿದ್ದು, ಆಹಾರದ ಮೇಲೆ ಶೇ 60 ರಷ್ಟು ರಿಯಾಯಿತಿ ಪಡೆಯಬಹುದು. ಜೊತೆಗೆ ವಿಶೇಷ ದಿನದಲ್ಲಿ ಮೊದಲ ಆರ್ಡರ್ ಗೆ 150 ರೂ ಕ್ಯಾಶ್ ಬ್ಯಾಕ್ ಪಡೆಯುವ ಕೊಡುಗೆ ನೀಡಲಾಗಿದೆ.

ಇನ್ನು, ಪ್ರಮುಖ ಇ–ಕಾಮರ್ಸ್ ತಾಣ ಅಮೆಜಾನ್‌ ತನ್ನ ವಾರ್ಷಿಕ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಆರಂಭಿಸುವುದಾಗಿ ತಿಳಿಸಿದ್ದು, ಈ ಸೇಲ್ ಮೇಳವು ಅಕ್ಟೋಬರ್ 3 ರಂದು ಆರಂಭವಾಗಲಿದೆ ಎಂದು ಹೇಳಲಾಗಿದೆ

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.